Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ದೇಶಭಕ್ತಿ ನೋಡಿ ಭಾವುಕರಾದ ವಿರಾಟ್ ಕೊಹ್ಲಿ!

ಅಭಿಮಾನಿಗಳ ದೇಶಭಕ್ತಿ ನೋಡಿ ಭಾವುಕರಾದ ವಿರಾಟ್ ಕೊಹ್ಲಿ!
ಲಾರ್ಡ್ಸ್ , ಬುಧವಾರ, 18 ಜುಲೈ 2018 (09:33 IST)
ಲಾರ್ಡ್ಸ್: ಟೀಂ ಇಂಡಿಯಾ ಹೋದಲೆಲ್ಲಾ ಅಭಿಮಾನಿಗಳು ಸೇರುವುದರಿಂದ ಕ್ರಿಕೆಟಿಗರಿಗೆ ಎಲ್ಲೇ ಹೋದರೂ ತವರಿನಂತೇ ಅನಿಸುತ್ತದೆ. ಅಭಿಮಾನಿಗಳ ಈ ಪ್ರೀತಿಗೆ ನಾಯಕ ವಿರಾಟ್ ಕೊಹ್ಲಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಆಂಗ್ಲರ ನಾಡಿನಲ್ಲಿ ಸರಣಿ ನಡೆಯುತ್ತಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವ ಅಭಿಮಾನಿಗಳು ಟೀಂ ಇಂಡಿಯಾಕ್ಕೆ ಭಾರೀ ಪ್ರೋತ್ಸಾಹ ನೀಡುತ್ತಿದ್ದಾರೆ. ಅಭಿಮಾನಿಗಳ ಈ ಉತ್ಸಾಹ ನೋಡಿ ಕೊಹ್ಲಿ ಭಾವುಕರಾಗಿದ್ದಾರೆ.

ತಮ್ಮ ಟ್ವಿಟರ್ ಪೇಜ್ ನಲ್ಲಿ ದ್ವಿತೀಯ ಏಕದಿನ ಪಂದ್ಯದಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾರೀ ಸಂಖ್ಯೆಯಲ್ಲಿ ಹಾಜರಿದ್ದು, ಟೀಂ ಇಂಡಿಯಾ ಜತೆಗೆ ಧ್ವನಿಗೂಡಿಸಿದವರಿಗೆ ವಿಶೇಷ ಧನ್ಯವಾದ ಸಲ್ಲಿಸಿರುವ ಕೊಹ್ಲಿ, ಈ ಬೆಂಬಲ ಯಾವತ್ತೂ ನಮ್ಮ ಮೇಲಿರಲಿ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಮೊದಲ ಏಕದಿನ ಪಂದ್ಯ ಮುಗಿದಾಗ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೂಡಾ ಭಾರತೀಯ ಪ್ರೇಕ್ಷಕರನ್ನು ಹೊಗಳಿದ್ದರು. ನಿನ್ನೆ ನಡೆದ ಅಂತಿಮ ಏಕದಿನ ಪಂದ್ಯದಲ್ಲೂ ಭಾರತೀಯ ಪ್ರೇಕ್ಷಕರು ಗ್ಯಾಲರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಾಜರಿದ್ದು ತಮ್ಮ ತಂಡಕ್ಕೆ ಬೆಂಬಲ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯೋಗದ ಹುಚ್ಚಿನಲ್ಲಿ ಸರಣಿ ಕಳೆದುಕೊಂಡ ಟೀಂ ಇಂಡಿಯಾ