Select Your Language

Notifications

webdunia
webdunia
webdunia
webdunia

ಲಂಕಾ ನಾಯಕನ ವರ್ತನೆಗೆ ಪೆವಲಿಯನ್ ನಲ್ಲೇ ಸಿಟ್ಟಿಗೆದ್ದ ಕೊಹ್ಲಿ

webdunia
ಕೋಲ್ಕೊತ್ತಾ , ಭಾನುವಾರ, 19 ನವೆಂಬರ್ 2017 (08:33 IST)
ಕೋಲ್ಕೊತ್ತಾ: ಸ್ವಭಾವತಃ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಇರುತ್ತಾರೆ. ಆದರೆ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಕೊಹ್ಲಿ ಸಿಟ್ಟಾಗಿದ್ದಕ್ಕೂ ಕಾರಣವಿತ್ತು.
 

ಭಾರತದ 53 ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಭುವನೇಶ್ವರ್ ಕುಮಾರ್ ಚೆಂಡನ್ನು ಕವರ್ ಕಡೆಗೆ ತಳ್ಳಿ ಸಿಂಗಲ್ಸ್ ಓಡಿ ದ್ವಿತೀಯ ರನ್ ಗೆ ಓಡಬೇಕೆನ್ನುವಷ್ಟರಲ್ಲಿ ಕವರ್ ಕ್ಷೇತ್ರದಲ್ಲಿ ದಿನೇಶ್ ಚಂಡಿಮಾಲ್ ಚೆಂಡು ಕೈಯಲ್ಲಿದ್ದವರಂತೆ ನಾಟಕವಾಡಿದರು.

ಇದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ. ಈ ರೀತಿ ಫೇಕ್ ಫೀಲ್ಡಿಂಗ್ ಮಾಡಿದರೆ ಎದುರಾಳಿ ತಂಡಕ್ಕೆ 5 ರನ್ ನೀಡಿ ದಂಡ ವಿಧಿಸಬಹುದಾಗಿದೆ ಎಂದು ಐಸಿಸಿ ಹೊಸ ನಿಯಮ ಹೇಳುತ್ತದೆ. ಆದರೆ ಅಂಪಾಯರ್ ಗಳು ದಂಡ ವಿಧಿಸದೇ ಇರಲು ತೀರ್ಮಾನಿಸಿದರು.

ಆದರೆ ಪೆವಿಲಿಯನ್ ನಲ್ಲಿ ಕುಳಿತಿದ್ದ ಕೊಹ್ಲಿ ಸಿಟ್ಟಿಗೆದ್ದರಲ್ಲದೆ, ಟಿವಿ ಕ್ಯಾಮರಾ ಕಡೆಗೆ ಕೈ ಎತ್ತಿ ಐದು ಬೆರಳು ತೋರಿಸಿ ಆ ನಿಯಮವನ್ನು ನೆನಪಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ ನಲ್ಲಿ ಮತ್ತೆ ಟೀಂ ಇಂಡಿಯಾ-ಲಂಕಾ ಸರಣಿ