Select Your Language

Notifications

webdunia
webdunia
webdunia
webdunia

ಧೋನಿ ದಾಖಲೆ ಮೇಲೆ ಕೊಹ್ಲಿ ಕಣ್ಣು

ಧೋನಿ ದಾಖಲೆ ಮೇಲೆ ಕೊಹ್ಲಿ ಕಣ್ಣು
ನವದೆಹಲಿ , ಶನಿವಾರ, 23 ಸೆಪ್ಟಂಬರ್ 2017 (08:08 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಮಾಡಿದ್ದ ದಾಖಲೆಯೊಂದನ್ನು ಮುರಿಯುವ ಹಾದಿಯಲ್ಲಿದ್ದಾರೆ.

 
ಧೋನಿ ನಾಯಕನಾಗಿ ಸತತ 9 ಏಕದಿನ ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದ್ದರು. ಇದೀಗ ಧೋನಿ ನಂತರ ಟೀಂ ಇಂಡಿಯಾಗೆ ನಾಯಕರಾಗಿರುವ ಕೊಹ್ಲಿ ಆ ದಾಖಲೆಯನ್ನು ಮೀರುವ ಉತ್ಸಾಹದಲ್ಲಿದ್ದಾರೆ.

ಕೊಹ್ಲಿ ಇದುವರೆಗೆ 37 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 29 ಗೆಲುವು ಕಂಡಿದ್ದಾರೆ. ಕೇವಲ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾಗೆ ನಾಳೆ ನಡೆಯಲಿರುವ ತೃತೀಯ ಏಕದಿನ ಪಂದ್ಯವನ್ನೂ ಗೆದ್ದು, ಸತತ 9 ಗೆಲುವಿನ ದಾಖಲೆ ಮಾಡುವುದು ಕಷ್ಟವಾಗಲಾರದು.

ಇದನ್ನೂ ಓದಿ.. ಮನೀಶ್ ಪಾಂಡೆ ಶರ್ಟ್ ಬಿಚ್ಚಿಸಿ ಟೀಂ ಇಂಡಿಯಾ ಸೆಲೆಬ್ರೇಷನ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೀಶ್ ಪಾಂಡೆ ಶರ್ಟ್ ಬಿಚ್ಚಿಸಿ ಟೀಂ ಇಂಡಿಯಾ ಸೆಲೆಬ್ರೇಷನ್