Publish Date: Mon, 02 Mar 2020 (09:11 IST)
Updated Date: Mon, 02 Mar 2020 (09:13 IST)
ಕ್ರಿಸ್ಟ್ ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ವರ್ತನೆಯಿಂದಾಗಿ ಸುದ್ದಿಯಾಗಿದ್ದಾರೆ.
ನ್ಯೂಜಿಲೆಂಡ್ ನ ಟಾಮ್ ಲಥಮ್ ವಿಕೆಟ್ ನ್ನು ಮೊಹಮ್ಮದ್ ಶಮಿ ಉಡಾಯಿಸಿದಾಗ ಕೊಹ್ಲಿ ಪ್ರೇಕ್ಷಕರ ಕಡೆಗೆ ತಿರುಗಿ ಬೆರಳು ಸನ್ನೆ ಮಾಡಿ ಸುಮ್ಮನಿರುವಂತೆ ಆಕ್ರೋಶ ಭರಿತರಾಗಿ ಸನ್ನೆ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಹ್ಲಿ ವರ್ತನೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಈ ವರ್ಷ ಮೈದಾನದಲ್ಲಿ ಸ್ಪೂರ್ತಿದಾಯಕ ನಡೆಗಾಗಿ ಪ್ರಶಸ್ತಿ ಪಡೆದಿದ್ದ ವಿರಾಟ್ ಈ ರೀತಿ ಆಕ್ರಮಣಕಾರಿ ವರ್ತನೆ ಮಾಡಿರುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.