Publish Date: Mon, 02 Mar 2020 (08:42 IST)
Updated Date: Mon, 02 Mar 2020 (08:45 IST)
ಕ್ರಿಸ್ಟ್ ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ 7 ವಿಕೆಟ್ ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಟೆಸ್ಟ್ ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಮೂರನೇ ದಿನದಾಟದಲ್ಲಿ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ ಜುಜುಬಿ 124 ರನ್ ಗಳಿಗೆ ಆಲೌಟ್ ಆಗುವ ಮೂಲಕ ಎದುರಾಳಿಗೆ ಗೆಲ್ಲಲು 132 ರನ್ ಗಳ ಸುಲಭ ಗುರಿ ನೀಡಿತು. ಇದನ್ನು ಕಿವೀಸ್ 3 ವಿಕೆಟ್ ನಷ್ಟಕ್ಕೆ ತಲುಪುವುದರೊಂದಿಗೆ ಸರಣಿ ತನ್ನದಾಗಿಸಿಕೊಂಡಿತು.
ಈ ಮೂಲಕ ಹಸಿರು ಪಿಚ್ ನಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಮತ್ತೊಮ್ಮೆ ಬೆತ್ತಲಾದರು. ಭಾರತ ಮೊದಲ ಇನಿಂಗ್ಸ್ ನಲ್ಲಿ 242 ರನ್ ಗಳಿಗೆ ಆಲೌಟ್ ಆಗಿದ್ದರೆ ಕಿವೀಸ್ 235 ರನ್ ಗಳಿಸಿತ್ತು.