Publish Date: Tue, 28 Jan 2020 (09:04 IST)
Updated Date: Tue, 28 Jan 2020 (09:06 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದಾರೆ. ಇಂತಿಪ್ಪ ಕೊಹ್ಲಿ ತಮ್ಮ ಸಹ ಆಟಗಾರನ ಭವಿಷ್ಯಕ್ಕೆ ನೆರವಾದ ಕತೆಯನ್ನು ಅದೇ ಆಟಗಾರನೇ ಹಂಚಿಕೊಂಡಿದ್ದಾರೆ.
2016 ರಲ್ಲಿ ಆರ್ ಸಿಬಿ ಪರ ಐಪಿಎಲ್ ಆಡಿದ್ದ ಕ್ರಿಕೆಟಿಗ ಸರ್ಫರಾಜ್ ಖಾನ್ ಆಗ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿರಲಿಲ್ಲವಂತೆ. ಇದೇ ಕಾರಣಕ್ಕೆ ಸಹ ಆಟಗಾರರು ಆತನನ್ನು ಪಾಂಡಾ ಎಂದು ತಮಾಷೆಯಾಗಿ ಕರೆಯುತ್ತಿದ್ದರಂತೆ.
2016 ರಲ್ಲಿ ಆರ್ ಸಿಬಿಯಿಂದ ನನ್ನನ್ನು ಕೈಬಿಡಲೂ ಇದೇ ಕಾರಣವಾಯಿತು. ನನ್ನನ್ನು ಕೈ ಬಿಡುವಾಗ ಕೊಹ್ಲಿ ನಿನ್ನ ಕೌಶಲ್ಯದ ಬಗ್ಗೆ ನಮಗೆ ಸಂಶಯವಿಲ್ಲ. ಆದರೆ ನೀನು ಇನ್ನೂ ಫಿಟ್ ಆಗಬೇಕು ಎಂದು ತಿಳಿಸಿ ಹೇಳಿದರು. ಅದಾದ ಬಳಿಕ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಕೊಟ್ಟೆ ಎಂದು ಸರ್ಫರಾಜ್ ಹೇಳಿದ್ದಾರೆ. ಇದಾದ ಬಳಿಕ ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುತ್ತಿರುವ ಸರ್ಫರಾಜ್ ಪ್ರಸಕ್ತ ಮುಂಬೈ ಪರ ರಣಜಿ ಟ್ರೋಫಿ ಪಂದ್ಯದಲ್ಲೂ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ.