ವಿರಾಟ್ ಕೊಹ್ಲಿಯ ಆ ಒಂದು ಟ್ವೀಟ್ ನಿಂದ ಅಭಿಮಾನಿಗಳಲ್ಲಿ ಅನುಮಾನ ಶುರು!

ಶುಕ್ರವಾರ, 6 ಮಾರ್ಚ್ 2020 (11:49 IST)
ಮುಂಬೈ: ನ್ಯೂಜಿಲೆಂಡ್ ನಲ್ಲಿ ಹೀನಾಯ ಸರಣಿ ಸೋಲಿನ ಬಳಿಕ, ರನ್ ಬರ ಎದುರಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವೀಟ್ ಒಂದು ಈಗ ಅಭಿಮಾನಿಗಳಲ್ಲಿ ಗೊಂದಲ ಹುಟ್ಟು ಹಾಕಿದೆ.


‘ಬದಲಾವಣೆಯೇ ನಿರಂತರ’ ಎಂಬರ್ಥದಲ್ಲಿ ಫೋಟೋ ಜತೆಗೆ ಟ್ವೀಟ್ ಮಾಡಿರುವ ಕೊಹ್ಲಿ, ಅಭಿಮಾನಿಗಳ ತಲೆಯಲ್ಲಿ ಅನುಮಾನದ ಹುಳ ಬಿಟ್ಟಿದ್ದಾರೆ. ಅಷ್ಟಕ್ಕೂ ಕೊಹ್ಲಿ ಯಾಕೆ ಇಂತಹದ್ದೊಂದು ಟ್ವೀಟ್ ಮಾಡಿದರು ಎಂದು ಅಭಿಮಾನಿಗಳು ತಮಗೆ ತೋಚಿದಂತೆ ಅಭಿಪ್ರಾಯ  ವ್ಯಕ್ತಪಡಿಸುತ್ತಿದ್ದಾರೆ.

ಜತೆಗೆ ವಿರಾಟ್ ಮತ್ತೆ ಮೊದಲಿನ ಅಗ್ರೆಷನ್ ಗೆ ಬನ್ನಿ. ಕಮ್ ಬ್ಯಾಕ್ ಮಾಡಿ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನಿಮ್ಮ ಉದ್ದೇಶವೇನು? ಹೊಸ ಬದಲಾವಣೆ ಏನಾದರೂ ಮಾಡಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರವೀಂದ್ರ ಜಡೇಜಾಗೆ ರಣಜಿ ಆಡಲು ಪರ್ಮಿಷನ್ ಕೊಡದ ಸೌರವ್ ಗಂಗೂಲಿ