Webdunia - Bharat's app for daily news and videos

Install App

ಸದ್ದಿಲ್ಲದೇ ಎಂಗೇಜ್ ಆದ ರಿಂಕು ಸಿಂಗ್: ಹುಡುಗಿ ಸಾಮಾನ್ಯದವಳಲ್ಲ

Sampriya
ಶುಕ್ರವಾರ, 17 ಜನವರಿ 2025 (18:53 IST)
Photo Courtesy X
ನವದೆಹಲಿ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರು ಉತ್ತರ ಪ್ರದೇಶದ ಮಚ್ಲಿಶಹರ್ ಪ್ರತಿನಿಧಿಸುವ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ರಿಂಕು ಅಥವಾ ಪ್ರಿಯಾ ಅವರ ನಿಶ್ಚಿತಾರ್ಥದ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಲಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಂಕು ಸಿಂಗ್ ಹಾಗೂ ಪ್ರಿಯಾ ಎಂಗೇಜ್ಮೆಂಟ್ ಸುದ್ದಿ ವೈರಲ್ ಆಗಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಉದಯೋನ್ಮುಖ ತಾರೆಯಾಗಿರುವ ರಿಂಕು ಸಿಂಗ್ ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಟಿ20 ತಂಡದ ಭಾಗವಾಗಿದ್ದಾರೆ.

ಪ್ರಿಯಾ ಸರೋಜ್, 2024 ರಲ್ಲಿ 25 ನೇ ವಯಸ್ಸಿನಲ್ಲಿ ಲೋಕಸಭಾ ಸಂಸದರಾದರು. ಈ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬೆಂಬಲದೊಂದಿಗೆ, ಅವರು ಮಚ್ಲಿಶಹರ್ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ಅಭ್ಯರ್ಥಿ ಬಿಪಿ ಸರೋಜ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದರು. ನವೆಂಬರ್ 23, 1998 ರಂದು ಜನಿಸಿದ ಪ್ರಿಯಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ, ಈ ಹಿಂದೆ 1999, 2004 ಮತ್ತು 2009 ರಲ್ಲಿ ಇದೇ ಕ್ಷೇತ್ರದಿಂದ ಸಂಸದರಾಗಿ ಸೇವೆ ಸಲ್ಲಿಸಿದ ತಮ್ಮ ತಂದೆ ತೂಫಾನಿ ಸರೋಜ್ ಅವರ ರಾಜಕೀಯ ಪರಂಪರೆಯನ್ನು ಮುಂದುವರೆಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 RCB vs DC: ಯಾರು ಏನಾರ ಹೇಳ್ಳಿ, ನಾವು ಒಳ್ಳೆ ಫ್ರೆಂಡ್ಸ್ ಎಂದ್ರು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ video

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಯಾರೆಂದು ಕೊನೆಗೂ ಪತ್ತೆ

IPL 2025 RCB vs DC: ಕೆಎಲ್ ರಾಹುಲ್ ನೋಡ್ಕೋ ಈವತ್ತು ನಮ್ಮ ಕಿಂಗ್ ಕೊಹ್ಲಿ ತಾಕತ್ತು

Pahalgam Attack, ಪಾಕ್‌ ಜತೆಗಿನ ಎಲ್ಲ ಕ್ರಿಕೆಟ್ ಸಂಬಂಧ ಮುರಿಯಬೇಕು: ಮಾಜಿ ಕ್ರಿಕೆಟಿಗ ಸೌರವ್ ಗಂಗೋಲಿ ಒತ್ತಾಯ

DC vs RCB Match: ಫ್ಯಾನ್ಸ್‌ ಕಾದಿದ್ದ ದಿನಕ್ಕೆ ಕ್ಷಣಗಣನೆ ಶುರು, ಕಿಂಗ್ ಕೊಹ್ಲಿ, ಕೆಎಲ್‌ ರಾಹುಲ್‌ಗೆ ಕೊಡ್ತಾರಾ ಕೌಂಟರ್‌

ಮುಂದಿನ ಸುದ್ದಿ
Show comments