Webdunia - Bharat's app for daily news and videos

Install App

ವಿರಾಟ್-ಅನುಷ್ಕಾ ನಡುವೆ ಪ್ರೀತಿ ಹುಟ್ಟಿದ್ದು ಹೀಗಂತೆ! ವಿರಾಟ್ ಬಿಚ್ಚಿಟ್ಟ ಪ್ರೀತಿಯ ಕತೆ...

Webdunia
ಶುಕ್ರವಾರ, 6 ಆಗಸ್ಟ್ 2021 (10:23 IST)
Anushka Sharma - Virat Kohli: ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಪ್ರೇಮ ಕತೆ ಯಾವುದೇ ‘ಫೇರಿ ಟೇಲ್’ಗೆ ಕಡಿಮೆ ಇಲ್ಲ. ಅದು ಶುರುವಾಗಿದ್ದು 2013ರಲ್ಲಿ.

ಅವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದು ಶಾಂಪೂ ಜಾಹೀರಾತಿನ ಶೂಟಿಂಗ್ ಒಂದರಲ್ಲಿ. ಮತ್ತೊಬ್ಬ ಜನಪ್ರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂದರ್ಶನದಲ್ಲಿ, ತಾವು ಮೊದಲ ಬಾರಿಗೆ ಅನುಷ್ಕಾರನ್ನು ಭೇಟಿಯಾಗಿದ್ದು ಮತ್ತು ಅವರಿಬ್ಬರು ಮಾತನಾಡಲು ಕಾರಣವಾದ ಸನ್ನಿವೇಶದ ನೆನಪುಗಳನ್ನು ಹಂಚಿಕೊಂಡಿದ್ದಾರೆ ವಿರಾಟ್ ಕೊಹ್ಲಿ. ಅನುಷ್ಕಾ ಜೊತೆ ಜೋಕು ಮಾಡುತ್ತಾ ಮಾಡುತ್ತಾ ಒಂದು ಹಂತದಲ್ಲಿ ಅವರ ಜೊತೆ ಭಾಂದವ್ಯ ಬೆಸೆಯಲು ಆರಂಭವಾಗಿದ್ದನ್ನು 32 ವರ್ಷದ ಕ್ರಿಕೆಟಿಗ ಹೇಳಿದ್ದಾರೆ. “ನಾನು ಎಲ್ಲರೊಂದಿಗೆ ಜೋಕ್ ಮಾಡುತ್ತಿದ್ದೆ. ಹಾಗೆಯೇ ಅವಳೊಂದಿಗೂ ಜೋಕ್ ಮಾಡಲು ಆರಂಭಿಸಿದೆ. ‘ನಾನು ಬಾಲ್ಯದಲ್ಲಿ ಅನುಭವ ಮಾಡಿರುವ ಸಂಗತಿಗಳ ಬಗ್ಗೆ, ನನ್ನೊಡನೆ ಜೋಕ್ಸ್ ಮಾಡಿದ ವ್ಯಕ್ತಿಯನ್ನು ಕಂಡಿದ್ದು ಇದೇ ಮೊದಲ ಬಾರಿ’ ಎಂದಳು ಅನುಷ್ಕಾ. ಅದು ನಿಜಕ್ಕೂ ಕನೆಕ್ಸ್ ಆಯಿತು” ಎಂದು ವಿರಾಟ್ ದಿನೇಶ್ ಕಾರ್ತಿಕ್ಗೆ ಹೇಳಿದ್ದಾರೆ.
2019ರಲ್ಲಿ ಇನ್ ಡೆಪ್ತ್ ವಿತ್ ಗ್ರಹಮ್ ಬೆನ್ಸಿಂಗರ್ ಎಂಬ ಟಾಕ್ ಶೋನಲ್ಲಿ ವಿರಾಟ್ ಅನುಷ್ಕಾ ಜೊತೆಗಿನ ತಮ್ಮ ಮೊದಲ ಭೇಟಿಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತನಗೆ ಕೊಂಚ ಹೆದರಿಕೆ ಆಗಿತ್ತು, ಹಾಗಾಗಿ ಜೋಕ್ಗಳನ್ನು ಹೇಳುತ್ತಿದ್ದೆ ಎಂದಿದ್ದಾರೆ ವಿರಾಟ್. “ಮೊದಲ ಬಾರಿ ಆಕೆಯನ್ನು ಭೇಟಿ ಆದಾಗ ಕೂಡಲೇ ಒಂದು ಜೋಕ್ ಹೇಳಿಬಿಟ್ಟೆ, ಏಕೆಂದರೆ ನಾನು ಹೆದರಿದ್ದೆ. ನನಗೇನು ಮಾಡಬೇಕು ಎಂದು ಗೊತ್ತಾಗಲಿಲ್ಲ, ಅದಕ್ಕೆ ಜೋಕ್ ಹೇಳಿಬಿಟ್ಟೆ” .“ನಾನು ಅಂದು ಅಸಮಂಜಸವಾದದ್ದನೇನೋ ಹೇಳಿಬಿಟ್ಟಿದ್ದೆ” ಎಂದು ವಿರಾಟ್ ಸಂದರ್ಶನದಲ್ಲಿ ಹೇಳಿದ್ದಾರೆ.
ಅವರು ಜಾಹೀರಾತಿನ ಸೆಟ್ನಲ್ಲಿ ಅನುಷ್ಕಾಗೆ ಹೇಳಿದ್ದು ಹೀಗಿದೆ: “ನಿಮಗೆ ಎತ್ತರದ ಹೀಲ್ಡ್ಸ್ ಸಿಗಲಿಲ್ಲವೇ?”.ಅದಕ್ಕೆ ಅನುಷ್ಕಾ 'ಎಕ್ಸ್ಕ್ಯೂಸ್ಮಿ' ಎಂಬಂತೆ ನೋಡಿದರೆ, “ಇಲ್ಲ, ನಾನು ಸುಮ್ಮನೆ ಜೋಕ್ ಮಾಡುತ್ತಿದ್ದೆ” ಎಂದು ವಿರಾಟ್ಹೇಳಿದ್ದರಂತೆ. ನನ್ನ ಜೋಕ್ ಆ ಕ್ಷಣದಲ್ಲಿ ವಿಲಕ್ಷಣವೆನಿಸಿಬಿಟ್ಟಿತ್ತು. ನಾನೆಂತ ದಡ್ಡನಾಗಿದ್ದೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವಳು ತುಂಬಾ ಆತ್ಮ ವಿಶ್ವಾಸದಿಂದಿದ್ದಳು” ಎಂದಿದ್ದಾರೆ ವಿರಾಟ್.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2014ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಒಮ್ಮೆ ವಿರಾಟ್ “ಹೃದಯ ಒಡೆದಿದೆ” ಎಂಬ ಅಡಿಬರಹದೊಂದಿಗೆ ತನ್ನ ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದಾಗ, ಅವರಿಬ್ಬರ ಸಂಬಂಧ ಮುರಿದುಬಿದ್ದ ಬಗ್ಗೆ ಗಾಳಿಸುದ್ದಿ ಎದ್ದಿತ್ತು. ಬಳಿಕ ವಿರಾಟ್ ಆ ಪೋಸ್ಟನ್ನು ತೆಗೆದು ಹಾಕಿದ್ದರು. ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ವಿರಾಟ್ ಮತ್ತು ಅನುಷ್ಕಾ ಜೊತೆಗಿರುವ ಫೋಟೋಗಳು ಅವರಿಬ್ಬರು ಮತ್ತೆ ಒಂದಾಗಿದ್ದಾರೆ ಎಂಬುದನ್ನು ಸೂಚಿಸಿದ್ದವು. 2017ರಲ್ಲಿ ಅವರಿಬ್ಬರು ಇಟಲಿಯಲ್ಲಿ ಮದುವೆಯಾದರು

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ಮುಂದಿನ ಸುದ್ದಿ
Show comments