ರಾಹುಲ್ ದ್ರಾವಿಡ್ ಎಂದರೆ ಈ ಕ್ರಿಕೆಟಿಗನಿಗೆ ಭಯವಂತೆ!

Webdunia
ಶುಕ್ರವಾರ, 23 ಫೆಬ್ರವರಿ 2018 (11:17 IST)
ಮುಂಬೈ: ಅಂಡರ್ 19 ಭಾರತ ತಂಡದ ಕೋಚ್ ಆಗಿ ಯಶಸ್ಸು ಸಾಧಿಸಿದ ರಾಹುಲ್ ದ್ರಾವಿಡ್ ಬಗ್ಗೆ ಯುವ ಕ್ರಿಕೆಟಿಗ ನಾಗರಕೋಟಿಗೆ ಭಯವಿತ್ತಂತೆ!
 

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿ ಸಂದರ್ಭ ವಯೋ ಸಹಜವಾಗಿ ನಾಗರಕೋಟಿ ಮತ್ತು ಇತರ ತಂಡದ ಸದಸ್ಯರಿಗೆ ದ್ರಾವಿಡ್ ಕೆಲವು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದರು. ಹಾಗಿದ್ದರೂ ಕ್ರಿಕೆಟಿಗರಿಗೆ ನ್ಯೂಜಿಲೆಂಡ್ ನಲ್ಲಿ ಕೆಲವು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂಬ ಆಸೆ ಇತ್ತಂತೆ.

ಆದರೆ ದ್ರಾವಿಡ್ ಬಿಲುಕುಲ್ ಒಪ್ಪುತ್ತಿರಲಿಲ್ಲವಂತೆ. ಟೂರ್ನಮೆಂಟ್ ನಡೆಯುವಾಗ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಖಡಕ್ ಆಗಿ ಹೇಳಿದ್ದರಂತೆ. ಹಾಗಿದ್ದರೂ ದಿನದ ಕೆಲ ಹೊತ್ತು ಕೆಲವೊಮ್ಮೆ ಹೊರಗೆ ಸುತ್ತಾಡಲು ದ್ರಾವಿಡ್ ಸರ್ ಅವಕಾಶ ನೀಡುತ್ತಿದ್ದರು. ಹಾಗಿದ್ದರೂ ಅವರು ಹೇಳಿದ ಸಮಯದೊಳಗೆ ಹೋಟೆಲ್ ಗೆ ಬಂದು ಸೇರಬೇಕಿತ್ತು ಎಂದು ನಾಗರಕೋಟಿ ಹೇಳಿದ್ದಾರೆ.

ದ್ರಾವಿಡ್ ಸರ್ ಎಂದರೆ ನಮಗೆ ಭಯವಿತ್ತು. ಹಾಗಿದ್ದರೂ ಅವರ ಸೂಚನೆಯನ್ನು ಮೀರಿರುತ್ತಿರಲಿಲ್ಲ. ದ್ರಾವಿಡ್ ಸರ್ ಏನೇ ಹೇಳಿದರೂ ನಮ್ಮ ಒಳ್ಳೆಯದಕ್ಕೇ ಹೇಳ್ತಾರೆ ಎಂದು ಅವರು ಹೇಳಿದ್ದನ್ನು ಪಾಲಿಸುತ್ತಿದ್ದೆವು ಎಂದು ನಾಗರಕೋಟಿ ಹೇಳಿದ್ದಾರೆ. ನಾಗರಕೋಟಿ ಅಂಡರ್ 19 ವಿಶ್ವಕಪ್ ನಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

ಮುಂದಿನ ಸುದ್ದಿ
Show comments