Publish Date: Sat, 04 Nov 2017 (08:51 IST)
Updated Date: Sat, 04 Nov 2017 (08:53 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರನ್ನು ಆರಾಧಿಸುವವರ ಸಂಖ್ಯೆ ಅಷ್ಟೊಂದು ಮಂದಿ ಇದ್ದಾರೆ. ಸತಾಯಿಸುವ ಅಭಿಮಾನಿಗಳಿಂದ ತಪ್ಪಿಸಲು ಕ್ರಿಕೆಟಿಗರಿಗೆ ಬಿಸಿಸಿಐ ಈ ಸುಯೋಗ ಕರುಣಿಸಿದೆ.
ಕ್ರಿಕೆಟ್ ಪಂದ್ಯಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಕ್ರಿಕೆಟಿಗರಿಗೆ ಇದುವರೆಗೆ ಎಕಾನಮಿ ಕ್ಲಾಸ್ ಟಿಕೆಟ್ ನೀಡಲಾಗುತ್ತಿತ್ತು. ಇದರಿಂದಾಗಿ ವಿಮಾನದಲ್ಲಿ ಪ್ರಯಾಣಿಸುವ ಅಭಿಮಾನಿಗಳು ಕ್ರಿಕೆಟಿಗರ ಜತೆ ಸೆಲ್ಫೀ, ಆಟೋಗ್ರಾಫ್ ಗಾಗಿ ಮುಗಿಬಿದ್ದು ಕಿರಿ ಕಿರಿ ಮಾಡುತ್ತಾರೆ.
ಹೀಗಾಗಿ ಕ್ರಿಕೆಟಿಗರ ಸೂಪರ್ ಸ್ಟಾರ್ ಶ್ರೇಣಿಗೆ ತಕ್ಕಂತೆ ವಿಮಾನ ಪ್ರಯಾನಕ್ಕೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನೀಡಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಕಾಡುವ ಅಭಿಮಾನಿಗಳ ಕಾಟದಿಂದ ಮುಕ್ತಿ ನೀಡಬಹುದು ಬಿಸಿಸಿಐ ಚಿಂತಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ