Publish Date: Fri, 03 Nov 2017 (17:06 IST)
Updated Date: Fri, 03 Nov 2017 (17:12 IST)
ಪುಣೆ: ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಕರ್ನಾಟಕದ ಹುಡುಗರು ಇನಿಂಗ್ಸ್ ಗೆಲುವಿನತ್ತ ದಾಪುಗಾಲಿಡುತ್ತಿದ್ದಾರೆ.
383 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದು 628 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದ ಕರ್ನಾಟಕ ದಿನದಂತ್ಯಕ್ಕೆ ಮಹಾರಾಷ್ಟ್ರವನ್ನು 135 ರನ್ ಗಳಿಗೆ 4 ವಿಕೆಟ್ ಕಬಳಿಸಿ ಪಂದ್ಯವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ. ಇದೀಗ ಮೊದಲ ಇನಿಂಗ್ಸ್ ಹಿನ್ನಡೆ ತಪ್ಪಿಸಲು ಮಹಾರಾಷ್ಟ್ರ ಇನ್ನೂ 248 ರನ್ ಗಳಿಸಬೇಕಾದ ಅನಿವಾರ್ಯತೆಯಲ್ಲಿದೆ.
ದಿನದಂತ್ಯಕ್ಕೆ ಮಹಾರಾಷ್ಟ್ರ ಪರ ರಾಹುಲ್ ತ್ರಿಪಾಠಿ 33 ರನ್ ಮತ್ತು ರುತುರಾಜ್ ಗಾಯಕ್ ವಾಡ್ 61 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಕರ್ನಾಟಕ ಪರ ಅಭಿಮನ್ಯು ಮಿಥುನ್ 2 ವಿಕೆಟ್, ರೋಹಿತ್ ಮೋರೆ ಮತ್ತು ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಕಬಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ