Select Your Language

Notifications

webdunia
webdunia
webdunia
webdunia

ಒಂದೇ ಪಂದ್ಯದಲ್ಲಿ 136 ವೈಡ್ ಬಾಲ್!

ಒಂದೇ ಪಂದ್ಯದಲ್ಲಿ 136 ವೈಡ್ ಬಾಲ್!
ನವದೆಹಲಿ , ಗುರುವಾರ, 2 ನವೆಂಬರ್ 2017 (10:14 IST)
ನವದೆಹಲಿ: ಒಂದು ಪಂದ್ಯದಲ್ಲಿ ಇತರೆ ರನ್ ಎಂದರೆ ಎಷ್ಟು ನೀಡಬಹುದು? ಅದರಲ್ಲೂ ವೈಡ್ ಬಾಲ್? ಅಬ್ಬಬ್ಬಾ ಎಂದರೆ 10 ರಿಂದ 15 ಎಂದು ನೀವು ಲೆಕ್ಕಾಚಾರ ಹಾಕಿರಬಹುದು. ಆದರೆ ಇಲ್ಲೊಂದು ಪಂದ್ಯದಲ್ಲಿ ವೈಡ್ ಬಾಲ್ ಗಳ ಶತಕವೇ ಆಗಿದೆ!

 
ಬಿಸಿಸಿಐ ಅಂಡರ್ 19 ಮಹಿಳಾ ಪಂದ್ಯದಲ್ಲಿ ಮಣಿಪುರ ಮತ್ತು ನ್ಯಾಗಾಲ್ಯಾಂಡ್ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಬರೋಬ್ಬರಿ 136 ಎಸೆತಗಳು ವೈಡ್ ಆಗಿವೆ!

ಇದರಲ್ಲಿ ನ್ಯಾಗಾಲ್ಯಾಂಡ್  ಪಾಲು 42 ಮತ್ತು ಮಣಿಪುರ ತಂಡದ ಪಾಲು 92 ವೈಡ್ ಗಳು. ಇದರಲ್ಲಿ ಕೆಲವು ಬಾಲ್ ಗಳು 22 ಯಾರ್ಡ್ ಉದ್ದದ ಪಿಚ್ ನ ತುದಿಯನ್ನೂ ತಲುಪಿರಲಿಲ್ಲ. ಪಕ್ಕಾ ಗಲ್ಲಿ ಕ್ರಿಕೆಟ್ ಶೈಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯಾಗಾಲ್ಯಾಂಡ್ 38 ಓವರ್ ಗಳಲ್ಲಿ 215 ರನ್ ಗಳಿಸಿದರೆ, ಮಣಿಪುರ 27.3 ಓವರ್ ಗಳಲ್ಲಿ 94 ರನ್ ಗೇ ಬಾಲ ಮುದುರಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಗೆದ್ದರೂ ಲಾಭ ಪಡೆದಿದ್ದು ಪಾಕಿಸ್ತಾನ!