Select Your Language

Notifications

webdunia
webdunia
webdunia
webdunia

ಭಾನುವಾರದ ಪಂದ್ಯಕ್ಕೆ ಧೋನಿ ವಿವಾದಿತ ಗ್ಲೌಸ್ ಬಳಸ್ತಾರಾ? ಸುರೇಶ್ ರೈನಾ ಹೇಳಿದ್ದು ಹೀಗೆ

ಭಾನುವಾರದ ಪಂದ್ಯಕ್ಕೆ ಧೋನಿ ವಿವಾದಿತ ಗ್ಲೌಸ್ ಬಳಸ್ತಾರಾ? ಸುರೇಶ್ ರೈನಾ ಹೇಳಿದ್ದು ಹೀಗೆ
ನವದೆಹಲಿ , ಶನಿವಾರ, 8 ಜೂನ್ 2019 (09:40 IST)
ನವದೆಹಲಿ: ವಿಶ್ವಕಪ್ ಆಡಲಿಳಿದಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿಯ ಗ್ಲೌಸ್ ವಿವಾದ ಈಗ ಭಾರೀ ಚರ್ಚೆಯಾಗುತ್ತಿದೆ. ಧೋನಿ ಭಾರತೀಯ ಅರೆಸೇನಾ ಪಡೆಯ ಚಿಹ್ನೆ ಬಳಸಿ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಹಾಗಿದ್ದರೂ ಅಭಿಮಾನಿಗಳ ಆಕ್ರೋಶದ ಮೇರೆಗೆ ಐಸಿಸಿ ಕೂಡಾ ಮೆತ್ತಗಾಗುವ ಲಕ್ಷಣ ಕಾಣುತ್ತಿದೆ. ಈ ನಡುವೆ ವಿವಾದಗಳಿಂದ ದೂರವೇ ಇರುವ ಧೋನಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಈ ಗ್ಲೌಸ್ ಧರಿಸಿ ಆಡಬಹುದೇ ಎಂಬ ಅನುಮಾನಗಳಿಗೆ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಸಹ ಆಟಗಾರ ಸುರೇಶ್ ರೈನಾ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

‘ಬಹುಶಃ ಧೋನಿ ಮುಂದಿನ ಪಂದ್ಯಕ್ಕೆ ಗ್ಲೌಸ್ ಬದಲಾಯಿಸಲ್ಲ. ಅವರನ್ನು ಬಿಸಿಸಿಐ ಕೂಡಾ ಬೆಂಬಲಿಸಬೇಕು. ಮೈದಾನದಲ್ಲಿ ನಮಾಜ್ ಮಾಡಲೂ ಅವಕಾಶವಿದೆಯಂತೆ. ಹಾಗಿರುವಾಗ ದೇಶಭಕ್ತಿಯ ಸಂಕೇತವಾಗಿ ಸೇನೆಯ ಚಿಹ್ನೆ ಬಳಸಿದರೆ ತಪ್ಪೇನು?’ ಎಂದು ಸುರೇಶ್ ರೈನಾ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ತೊಳೆದ ವಿರಾಟ್ ಕೊಹ್ಲಿಗೆ ನಗರ ಪಾಲಿಕೆ ದಂಡ!