ಲಂಡನ್: ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ದ.ಆಫ್ರಿಕಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಸೇನೆಯ ಚಿಹ್ನೆಯುಳ್ಳ ಗ್ಲೌಸ್ ಧರಿಸಿದ್ದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ.
ಧೋನಿಯ ಗ್ಲೌಸ್ ಬಗ್ಗೆ ಐಸಿಸಿಯೇ ತಕರಾರು ತೆಗೆದಿದ್ದು ಧೋನಿ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಬಿಸಿಸಿಐ ಕೂಡಾ ಧೋನಿ ಬೆಂಬಲಕ್ಕೆ ನಿಂತಿದೆ.
ಈ ನಡುವೆ ಮ್ಯಾಚ್ ಫಿಕ್ಸಿಂಗ್ ವಿವಾದಕ್ಕೊಳಗಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಧೋನಿಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ‘ಧೋನಿ ಮಾತ್ರವಲ್ಲ, ಐಸಿಸಿ ಇಡೀ ಭಾರತಕ್ಕೇ ಕ್ಷಮೆ ಕೇಳಬೇಕು. ಇದು ಒಂದು ದೇಶದ ಮೇಲೆ ಹೀಗೆ ಕ್ರಿಕೆಟ್ ನಿಯಮಗಳನ್ನು ಹೇರುವುದು ಸರಿಯಲ್ಲ. ಧೋನಿ ಸೇನೆಯ ಗೌರವ ಸದಸ್ಯರೂ ಕೂಡಾ. ಅವರು ವಿಶ್ವ ವಿಜೇತ ನಾಯಕ. ಆ ಚಿಹ್ನೆ ಅವರ ದೇಶ ಪ್ರೇಮವನ್ನು ತೋರಿಸುತ್ತದೆ. ಇಡೀ ದೇಶವೇ ಅವರ ಬೆನ್ನಿಗಿದೆ’ ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ.