Publish Date: Fri, 12 Feb 2021 (10:05 IST)
Updated Date: Fri, 12 Feb 2021 (10:06 IST)
ಮುಂಬೈ: ಐಪಿಎಲ್ 14 ರ ಹರಾಜಿಗೆ ಹೆಸರು ನೊಂದಾಯಿಸಿದ್ದ ಕೇರಳ ಮೂಲದ ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಐಪಿಎಲ್ 14 ರಲ್ಲಿ ಹರಾಜಿಗೊಳಗಾಗಲಿರುವ 292 ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ಆದರೆ ಶ್ರೀಶಾಂತ್ ಗೆ ಸ್ಥಾನ ಸಿಕ್ಕಿಲ್ಲ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಹೊರಬಂದ ಮೇಲೆ ತಂಡಕ್ಕೆ ವಾಪಸಾತಿಯಾಗಬಹುದೆಂದು ಕನಸು ಕಾಣುತ್ತಿದ್ದ ಶ್ರೀಶಾಂತ್ ಗೆ ಇದು ಭಾರೀ ಹೊಡೆತ ನೀಡಿದೆ. ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಂಬನಾತ್ಮಕ ಸಂದೇಶ ಬರೆದಿದ್ದಾರೆ. ಇನ್ನೊಬ್ಬರನ್ನು ಮೆಚ್ಚಿಸಲು ನಮ್ಮತನವನ್ನು ಕಳೆದುಕೊಳ್ಳಬೇಕಾಗಿಲ್ಲ. ನಾವು ಏನಾಗಿದ್ದೇವೋ ಹಾಗೇ ಇರಲು ಧೈರ್ಯ ಬೇಕು. ಹಾಗೇ ಇರೋಣ ಎಂದು ಶ್ರೀಶಾಂತ್ ಪರೋಕ್ಷವಾಗಿ ತಮ್ಮನ್ನು ಪರಿಗಣಿಸದೇ ಇರುವುದಕ್ಕೆ ಚಾಟಿ ಬೀಸಿದ್ದಾರೆ.