Publish Date: Mon, 04 Jan 2021 (09:46 IST)
Updated Date: Mon, 04 Jan 2021 (09:48 IST)
ಕೋಲ್ಕೊತ್ತಾ: ಲಘು ಹೃದಯಾಘಾತಕ್ಕೊಳಗಾದ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಶನಿವಾರ ಆಂಜಿಯೋಪ್ಲಾಸ್ಟಿಗೊಳಗಾಗಿದ್ದರು.
ಆದರೆ ಅವರ ಮೂರು ಹೃದಯ ನಾಳಗಳಲ್ಲಿ ಬ್ಲಾಕೇಜ್ ಇದೆ. ಹೀಗಾಗಿ ಅವರಿಗೆ ಇನ್ನೊಂದು ಆಂಜಿಯೋಪ್ಲಾಸ್ಟಿ ಅಗತ್ಯ ಬರಬಹುದು ಎನ್ನಲಾಗಿದೆ. ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದಕೊಳ್ಳಲಾಗುವುದು ಎಂದು ವೈದ್ಯರು ಹೇಳಿದ್ದಾರೆ. ಈ ನಡುವೆ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.