Publish Date: Thu, 25 Aug 2022 (16:51 IST)
Updated Date: Thu, 25 Aug 2022 (16:55 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶುಬ್ನಂ ಗಿಲ್ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಸಮಯದಿಂದ ಸುದ್ದಿಯಿತ್ತು.
ಇಬ್ಬರೂ ಇನ್ ಸ್ಟಾಗ್ರಾಂನಲ್ಲಿ ಒಬ್ಬರ ಫೋಟೋಗಳಿಗೆ ಒಬ್ಬರು ಲೈಕ್, ಕಾಮೆಂಟ್ ಮಾಡುತ್ತಿದ್ದರು. ಅಲ್ಲದೆ, ಶುಬ್ನಂ ಮೈದಾನದಲ್ಲಿ ಸಾಧನೆ ಮಾಡಿದಾಗಲೆಲ್ಲಾ ಸಾರಾ ಶಹಬ್ಬಾಶ್ ಗಿರಿ ಕೊಡುತ್ತಿದ್ದರು.
ಆದರೆ ಈಗ ಇಬ್ಬರೂ ಪರಸ್ಪರ ಅನ್ ಫಾಲೋ ಮಾಡಿದ್ದು, ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಶುಬ್ನಂ ನಾನು ಭವಿಷ್ಯದ ಕಡೆಗೆ ನೋಡುತ್ತಿದ್ದೇನೆ ಎಂದು ಸಂದೇಶವೊಂದನ್ನು ಬರೆದುಕೊಂಡಿದ್ದು ಬ್ರೇಕಪ್ ಸುದ್ದಿಗೆ ಪುಷ್ಠಿ ನೀಡಿದೆ.