Publish Date: Fri, 22 Feb 2019 (09:44 IST)
Updated Date: Fri, 22 Feb 2019 (09:46 IST)
ಮುಂಬೈ: ಟೀಂ ಇಂಡಿಯಾ ಯುವ ಸೆನ್ಸೇಷನ್ ಶ್ರೇಯಸ್ ಅಯ್ಯರ್ ಟಿ20 ಮಾದರಿಕ ಕ್ರಿಕೆಟ್ ನಲ್ಲಿ ನೂತನ ದಾಖಲೆಯೊಂದನ್ನು ಮಾಡಿದ್ದಾರೆ.
ಇಂದೋರ್ ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ಶ್ರೇಯಸ್ ಭಾರತದ ಪರ ಟಿ20 ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 12 ನೇ ಗರಿಷ್ಠ ವೈಯಕ್ತಿಕ ರನ್ ಗಳಿಸಿದ್ದಾರೆ.
ಶತಕ ಗಳಿಸಿದ ಅಯ್ಯರ್ 147 ರನ್ ಗಳಿಸಿ ಈ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ರಿಷಬ್ ಪಂತ್ ಐಪಿಎಲ್ ನಲ್ಲಿ ಅಜೇಯ 128 ರನ್ ಗಳಿಸಿದ್ದು ಭಾರತದ ಪರ ಗರಿಷ್ಠ ಟಿ20 ರನ್ ದಾಖಲೆಯಾಗಿತ್ತು. ಇದೀಗ ಶ್ರೇಯಸ್ ಆ ದಾಖಲೆಯನ್ನು ಮುರಿದಿದ್ದಾರೆ. ಶ್ರೇಯಸ್ ಈ ಹೊಡೆಬಡಿಯ ಆಟದ ನೆರವಿನಿಂದ ತಮ್ಮ ತವರು ತಂಡ ಮುಂಬೈಗೆ ಸಿಕ್ಕಿಂ ಎದುರು 157 ರನ್ ಗಳ ಭರ್ಜರಿ ಜಯ ಕೊಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ