ಲಂಡನ್: ಟೀಂ ಇಂಡಿಯಾದ ಯಶಸ್ವೀ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ನಡುವೆ ಹೊಂದಾಣಿಕೆ ಚೆನ್ನಾಗಿಯೇ ಇದೆ. ಆದರೆ ಧವನ್ ಮಾಡುವ ಒಂದು ಕೆಲಸ ರೋಹಿತ್ ಗೆ ಕಿರಿ ಕಿರಿ ಆಗುತ್ತದಂತೆ. ಅದೇನೆಂದು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಶಿಖರ್ ಧವನ್ ಗೆ ಪ್ರತೀ ಪಂದ್ಯ ಆರಂಭವಾಗುವುದಕ್ಕೆ ಇನ್ನೇನು ಕೆಲವೇ ನಿಮಿಷ ಇದೆ ಎನ್ನುವಾಗ ಟಾಯ್ಲೆಟ್ ನಲ್ಲಿ ಕೂರುವ ಅಭ್ಯಾಸವಿದೆಯಂತೆ. ಎಲ್ಲರೂ ಪಂದ್ಯಕ್ಕೆ ಮೊದಲು ಅತ್ತಿತ್ತ ನಡೆದಾಡಿ ವಾರ್ಮ್ ಅಪ್ ಮಾಡಿಕೊಂಡರೆ ಧವನ್ ಗೆ ಟಾಯ್ಲೆಟ್ ಗೆ ಹೋಗುವ ಅಭ್ಯಾಸವಂತೆ. ಇದರಿಂದ ಪ್ರತೀ ಬಾರಿಯೂ ನಾನೇ ಮೊದಲು ಗಾರ್ಡ್ ತೆಗೆದುಕೊಳ್ಳುವುದು ಎಂದು ರೋಹಿತ್ ಕಂಪ್ಲೇಂಟ್.
ಧವನ್ ಗಿರುವ ಇನ್ನೊಂದು ಕೆಟ್ಟ ಅಭ್ಯಾಸವೆಂದರೆ ಯಾವತ್ತೂ ಶೂಗೆ ಸಾಕ್ಸ್ ತೆಗೆದುಕೊಂಡಲು ಬರಲು ಮರೆಯುತ್ತಾರಂತೆ. ಕೊನೆಗೆ ಸಹ ಆಟಗಾರರಿಂದ ಸಾಕ್ಸ್ ಎರವಲು ಪಡೆಯುತ್ತಾರೆ ಎಂದು ರೋಹಿತ್ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.