Select Your Language

Notifications

webdunia
webdunia
webdunia
webdunia

ಬಿಗ್ ಬಿ ಅಮಿತಾಭ್ ಬಚ್ಚನ್ ಗೂ, ಹಾರ್ದಿಕ್ ಪಾಂಡ್ಯಗೂ ಇದೆ ಈ ಕನೆಕ್ಷನ್!

ಬಿಗ್ ಬಿ ಅಮಿತಾಭ್ ಬಚ್ಚನ್ ಗೂ, ಹಾರ್ದಿಕ್ ಪಾಂಡ್ಯಗೂ ಇದೆ ಈ ಕನೆಕ್ಷನ್!
ಮುಂಬೈ , ಸೋಮವಾರ, 8 ಜನವರಿ 2018 (10:48 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಿದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪಾಂಡ್ಯರನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಹೋಲಿಸಿದ್ದಾರೆ.
 

‘ಅಮಿತಾಭ್ ಬಚ್ಚನ್ ರಂತೇ ಹಾರ್ದಿಕ್ ಪಾಂಡ್ಯ ಕೂಡಾ ದ್ವಿಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಅವರಲ್ಲಿ ಆಧುನಿಕ ಟಿ20 ಆಟಗಾರನ ಆಕ್ರಮಣಕಾರಿ ಸ್ವಭಾವವೂ ಕಾಣಿಸಿತು. ಪಕ್ಕಾ ಟೆಸ್ಟ್ ಆಟಗಾರನ ತಾಳ್ಮೆಯೂ ಕಾಣಿಸಿತು’ ಎಂದು ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ.

ಆದರೆ ಮಂಜ್ರೇಕರ್, ಹಾರ್ದಿಕ್ ಪಾಂಡ್ಯರನ್ನು ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಹೋಲಿಸಿದ್ದಕ್ಕೆ ಅಭಿಮಾನಿಗಳು ಆಕ್ಷೇಪವನ್ನೂ ಎತ್ತಿದ್ದಾರೆ. ಹೊಸಬ ಪಾಂಡ್ಯನನ್ನು ಸೂಪರ್ ಸ್ಟಾರ್ ಅಮಿತಾಭ್ ಗೆ ಹೋಲಿಸಬೇಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಕ್ರಿಕೆಟಿಗರ ಬಂಧನ