Select Your Language

Notifications

webdunia
webdunia
webdunia
webdunia

ತುಂಬು ಗರ್ಭಿಣಿ ಸಾನಿಯಾ ಮಿರ್ಜಾ ಟೆನಿಸ್ ಆಡಿದ್ರು!

ತುಂಬು ಗರ್ಭಿಣಿ ಸಾನಿಯಾ ಮಿರ್ಜಾ ಟೆನಿಸ್ ಆಡಿದ್ರು!
ಹೈದರಾಬಾದ್ , ಬುಧವಾರ, 8 ಆಗಸ್ಟ್ 2018 (09:24 IST)
ಹೈದರಾಬಾದ್: ಇನ್ನೇನು ಎರಡು ತಿಂಗಳಲ್ಲಿ ಅಮ್ಮನಾಗಲಿರುವ  ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತುಂಬು ಗರ್ಭಿಣಿಯಾಗಿದ್ದರೂ ಟೆನಿಸ್ ಅಂಕಣಕ್ಕೆ ಇಳಿದಿದ್ದಾರೆ.

ಗರ್ಭಿಣಿಯಾಗಿರುವ ಸಾನಿಯಾ ಯಾವುದೇ ಟೂರ್ನಮೆಂಟ್ ನಲ್ಲಿ ಆಡದೇ ಸಂಪೂರ್ಣವಾಗಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ, ಫೋಟೋ ಶೂಟ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೀಗ ತಮ್ಮ ಮೆಚ್ಚಿನ ಟೆನಿಸ್ ಆಟದ ಮೇಲಿನ ಪ್ರೇಮ ಸಾನಿಯಾರನ್ನು ಬಿಡದಂತೆ ಮಾಡಿದೆ. ಅದಕ್ಕಾಗಿಯೇ ಹೊಸ ಫೋಟೋ ಶೂಟ್ ಒಂದನ್ನು ಟೆನಿಸ್ ಅಂಕಣದಲ್ಲಿಯೇ ಮಾಡಿದ್ದಾರೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವ ಸಾನಿಯಾ ‘ಒಬ್ಬ ಟೆನಿಸ್ ಆಟಗಾರರನ್ನು ಕೆಲವು ಕಾಲ ಅಂಕಣದಿಂದ ದೂರವಿಡಬಹುದು. ಆದರೆ ಟೆನಿಸ್ ನ್ನು ಟೆನಿಸ್ ಆಟಗಾರರಿಂದ ದೂರ ಮಾಡಲಾಗದು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹೊಟ್ಟೆಯಲ್ಲಿ ತಮ್ಮ ಕಂದಮ್ಮನಿಟ್ಟುಕೊಂಡೇ ಟೆನಿಸ್ ಅಂಕಣದಲ್ಲಿ ನಿಂತಿರುವ ಫೋಟೋ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಮೂಲಕ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಟಾಂಗ್ ಕೊಟ್ಟ ರೋಹಿತ್ ಶರ್ಮಾ-ಕುಲದೀಪ್ ಯಾದವ್