Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಕ್ಕೆ ಎಚ್ಚರಿಕೆ ನೀಡಿಯೇ ಇಲ್ಲ: ಸೌರವ್ ಗಂಗೂಲಿಗೆ ನಕಲಿ ಖಾತೆ ತಂದ ಸಂಕಟ

ಟೀಂ ಇಂಡಿಯಾಕ್ಕೆ ಎಚ್ಚರಿಕೆ ನೀಡಿಯೇ ಇಲ್ಲ: ಸೌರವ್ ಗಂಗೂಲಿಗೆ ನಕಲಿ ಖಾತೆ ತಂದ ಸಂಕಟ
ಕೋಲ್ಕೊತ್ತಾ , ಮಂಗಳವಾರ, 7 ಆಗಸ್ಟ್ 2018 (10:17 IST)
ಕೋಲ್ಕೊತ್ತಾ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತ ಟೀಂ ಇಂಡಿಯಾಕ್ಕೆ ಸಲಹೆ ಜತೆಗೆ ಸಣ್ಣ ಎಚ್ಚರಿಕೆ ನೀಡಿರುವುದಾಗಿ ಪ್ರಕಟಿಸಿ ಇನ್ ಸ್ಟಾಗ್ರಾಂ ಖಾತೆ ತನ್ನದಲ್ಲ. ಇದು ನಕಲಿ. ಇದರಲ್ಲಿ ಬಂದ ಸುದ್ದಿ ನಂಬಬೇಡಿ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಸಿದ್ದಾರೆ.
 

ಗಂಗೂಲಿ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮುರಳಿ ವಿಜಯ್ ಮತ್ತು ಅಜಿಂಕ್ಯಾ ರೆಹಾನೆ ಇನ್ನಷ್ಟು ಜವಾಬ್ಧಾರಿಯುತವಾಗಿ ಆಡಬೇಕು. ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬಾರದು ಎಂದು ಗಂಗೂಲಿ ಹೇಳಿರುವುದಾಗಿ ಬರೆಯಲಾಗಿತ್ತು.

ಆದರೆ ಇದರ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಗಂಗೂಲಿ, ತನಗೆ ಇನ್ ಸ್ಟಾಗ್ರಾಂ ಖಾತೆಯೇ ಇಲ್ಲ. ಇದು ನಕಲಿ ಖಾತೆ. ಇದರಲ್ಲಿ ಬಂದಿರುವಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಇಂತಹ ಕೆಲಸ ಮತ್ತೆ ಮಾಡಿದರೆ ತಕ್ಕ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಸೌರವ್ ಗಂಗೂಲಿ ಎಚ್ಚರಿಕೆ