ಎಡ್ಜ್ ಬಾಸ್ಟನ್: ಟೀಂ ಇಂಡಿಯಾ ಕ್ರಿಕೆಟಿಗರು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತರೆಂದು ಅವರ ಮೇಲೆ ಅಭಿಮಾನಿಗಳು ಬೇಸರಗೊಂಡಿರಬಹುದು. ಆದರೆ ಹಾರ್ದಿಕ್ ಪಾಂಡ್ಯ ಮಾಡಿದ ಕೆಲಸವೊಂದು ಎಲ್ಲರ ಹೃದಯ ಗೆದ್ದಿದೆ.
ಅಷ್ಟಕ್ಕೂ ಪಾಂಡ್ಯ ಅಂತಹ ಕೆಲಸ ಏನು ಮಾಡಿದರು ಗೊತ್ತಾ? ಪಂದ್ಯ ಮುಗಿದ ಬಳಿಕ ಹೋಟೆಲ್ ಗೆ ತೆರಳುವಾಗ ಪಾಂಡ್ಯ ಕೊನೆಯವರಾಗಿ ಉಳಿದಿದ್ದರು. ಆಗ ಅವರ ಕೈಯಲ್ಲಿ ಆಹಾರದ ಪೊಟ್ಟಣವೊಂದಿತ್ತು.
ಇದನ್ನು ನೇರವಾಗಿ ಹೋಟೆಲ್ ಸಿಬ್ಬಂದಿಗೆ ನೀಡಿದ ಪಾಂಡ್ಯ, ಇದನ್ನು ನಾವು ಮುಟ್ಟಿ ಕೂಡಾ ನೋಡಿಲ್ಲ. ಸುಮ್ಮನೇ ಹಾಳು ಮಾಡಬೇಡಿ. ಯಾರಾದರೂ ಆಹಾರ ಕೇಳಿಕೊಂಡು ಬಂದರೆ ಕೊಟ್ಟು ಬಿಡಿ ಎಂದು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಅವರ ಈ ನಡೆ ನೋಡಿ ಹೋಟೆಲ್ ಸಿಬ್ಬಂದಿಗೆ ಹೃದಯ ತುಂಬಿ ಬಂದಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.