Webdunia - Bharat's app for daily news and videos

Install App

ರೋಹಿತ್ ಶರ್ಮಾ ಲವ್ ಸ್ಟೋರಿಗೆ ಯುವರಾಜ್ ಸಿಂಗ್ ಅಡ್ಡಗಾಲು ಹಾಕಿದ್ದರಂತೆ!

Webdunia
ಸೋಮವಾರ, 1 ಜನವರಿ 2018 (10:28 IST)
ಮುಂಬೈ: ರೋಹಿತ್ ಶರ್ಮಾ ಮೂರನೇ ಏಕದಿನ ದ್ವಿಶತಕ ಭಾರಿಸಿದ ಮೇಲೆ ಪತ್ನಿ ರಿತಿಕಾ ಜತೆಗಿನ ಪ್ರೀತಿಯನ್ನು ಬಹಿರಂಗವಾಗಿಯೇ ಹೊರ ಹಾಕಿದ್ದರು. ಆದರೆ ಈ ಇಬ್ಬರು ಕ್ಯೂಟ್ ಜೋಡಿಯ ಮೇಲೆ ಒಂದು ಕಾಲದಲ್ಲಿ ಯುವರಾಜ್ ಸಿಂಗ್ ವಿಲನ್ ಆಗಿದ್ದರಂತೆ!
 

ಹಾಗಂತ ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್ ‘ಒಂದು ಜಾಹೀರಾತು ಶೂಟಿಂಗ್ ಗಾಗಿ ನಾನು ಹಾಜರಾಗಿದ್ದೆ. ಅಲ್ಲಿ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಇದ್ದರು. ಆಗಲೇ ಯುವಿಯನ್ನು ನಾನು ಮೊದಲು ನೋಡಿದ್ದು. ಆ ಶೂಟಿಂಗ್ ಮ್ಯಾನೇಜ್ ಮಾಡುತ್ತಿದ್ದಿದ್ದು ರಿತಿಕಾ. ಆಗ ಯುವಿ ಪಾಜಿಗೆ ಹಾಯ್ ಎಂದೆ. ಆದರೆ ಯುವಿ ರಿತಿಕಾ ಕಡೆಗೆ ತೋರಿಸಿ ನೋಡು, ಆಕೆ ನನ್ನ ಸಹೋದರಿ. ಯಾವುದೇ ಕಾರಣಕ್ಕೂ ಆಕೆ ಕಡೆ ಕಣ್ಣೆತ್ತಿಯೂ ನೋಡಬೇಡ ಎಂದು ಎಚ್ಚರಿಕೆ ನೀಡಿದ್ದರು’ ಎಂದು ರೋಹಿತ್ ವಿವರಿಸಿದ್ದಾರೆ.

ಹಾಗಿದ್ದರೂ ಪ್ರೀತಿ ಮುಂದೆ ಇಂತಹ ಎಚ್ಚರಿಕೆಗಳೆಲ್ಲಾ ಕೆಲಸ ಮಾಡುತ್ತಾ? ರೋಹಿತ್ ಜೀವನದಲ್ಲೂ ಅದೇ ಆಯಿತು. ಇದಾದ ಬಳಿಕ ಆ ಜಾಹೀರಾತು ಶೂಟಿಂಗ್ ನಲ್ಲಿ ರಿತಿಕಾ ಕಡೆಗೆ ಗುರಾಯಿಸುತ್ತಲೇ ಶೂಟ್ ಮಾಡಿದರಂತೆ ರೋಹಿತ್.  ಆದರೆ ಕೊನೆಗೆ ರಿತಿಕಾ ನಿಮಗೆ ಏನಾದರೂ ಸಹಾಯ ಬೇಕಿದ್ದರೆ ನನಗೆ ಹೇಳಿ ಎಂದು ಪ್ರೀತಿಯಿಂದ ಹೇಳಿದಾಗ ರೋಹಿತ್ ಕರಗಿದರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments