Select Your Language

Notifications

webdunia
webdunia
webdunia
webdunia

ಧೋನಿ ಸ್ಪೂರ್ತಿ ಎಂತದ್ದೂ ಇಲ್ಲ, ನನ್ನಷ್ಟಕ್ಕೇ ಕಲಿತೆ ಎಂದ ರಾಜಸ್ಥಾನ್ ರಾಯಲ್ಸ್ ಕ್ರಿಕೆಟಿಗ

ಧೋನಿ ಸ್ಪೂರ್ತಿ ಎಂತದ್ದೂ ಇಲ್ಲ, ನನ್ನಷ್ಟಕ್ಕೇ ಕಲಿತೆ ಎಂದ ರಾಜಸ್ಥಾನ್ ರಾಯಲ್ಸ್ ಕ್ರಿಕೆಟಿಗ
ಕೋಲ್ಕೊತ್ತಾ , ಶನಿವಾರ, 27 ಏಪ್ರಿಲ್ 2019 (07:02 IST)
ಕೋಲ್ಕೊತ್ತಾ: ಹೆಲಿಕಾಪ್ಟರ್ ಶಾಟ್ ಎಂದರೆ ಅದು ಧೋನಿ ಟ್ರೇಡ್ ಮಾರ್ಕ್ ಶಾಟ್. ಈ ಶಾಟ್ ಯಾರೇ ಹೊಡೆದರೂ ಅದಕ್ಕೆ ಧೋನಿಯೇ ಸ್ಪೂರ್ತಿ ಎನ್ನುವುದು ಸಹಜ.


ಆದರೆ ರಾಜಸ್ಥಾನ್ ರಾಯಲ್ಸ್ ಆಟಗಾರ ರಿಯಾನ್ ಪರಾಗ್ ಮಾತ್ರ ವ್ಯತ್ಯಸ್ಥ ಹೇಳಿಕೆ ನೀಡಿದ್ದಾರೆ. ಹೆಲಿಕಾಪ್ಟರ್ ಶಾಟ್ ಹೊಡೆಯಲು ನನಗೆ ಧೋನಿ ಪ್ರೇರಣೆಯಲ್ಲ ಎಂದು ಅಚ್ಚರಿ ಮೂಡಿಸಿದ್ದಾರೆ.

ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆದಿದ್ದ ರಿಯಾನ್ ಪರಾಗ್ ‘ನಾನು ಜಸ್ಟ್ ಹೊಡೆದೆ ಅಷ್ಟೇ. ಅದು ಕ್ಲಿಕ್ ಆಯ್ತು. ಇದರಲ್ಲಿ ಧೋನಿ ಪ್ರೇರಣೆ ಏನೂ ಇಲ್ಲ. ಹಿಂದೆ ದೇಶೀಯ ಟೂರ್ನಿಗಳಲ್ಲಿ ಈ ಶಾಟ್ ಹೊಡೆದಿದ್ದೆ. ಹಾಗೇ ಇಲ್ಲೂ ಹೊಡೆದೆ ಅಷ್ಟೇ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮುಂಬೈ ವಿರುದ್ಧ ಧೋನಿ ಕಣಕ್ಕಿಳಿಯದೇ ಇದ್ದಿದ್ದರ ಕಾರಣ ಬಯಲು