ಆಸ್ಟ್ರೇಲಿಯನ್ನರನ್ನು ಸ್ಲೆಡ್ಜಿಂಗ್ ಮಾಡುತ್ತಾ ವಿರಾಟ್ ಕೊಹ್ಲಿಗೇ ಟಾಂಗ್ ಕೊಟ್ಟ ರಿಷಬ್ ಪಂತ್!

Webdunia
ಶನಿವಾರ, 15 ಡಿಸೆಂಬರ್ 2018 (09:33 IST)
ಪರ್ತ್: ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಲೆಡ್ಜಿಂಗ್ ಮಾಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಅವರು ಅದನ್ನೇ ಮುಂದುವರಿಸಿದ್ದಾರೆ.


ಆಸ್ಟ್ರೇಲಿಯಾದ ಎರಡು ವಿಕೆಟ್ ಉರುಳುತ್ತಿದ್ದಂತೇ ಜೋರು ಜೋರಾಗಿ ವಿಕೆಟ್ ಹಿಂದುಗಡೆ ನಿಂತು ಮಾತನಾಡುತ್ತಿದ್ದ ರಿಷಬ್ ಒಂದು ಹಂತದಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿಗೇ ಟಾಂಗ್ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಹನುಮ ವಿಹಾರಿ ಬೌಲಿಂಗ್ ಬಗ್ಗೆ ಕಾಮೆಂಟ್ ಮಾಡಿದ ರಿಷಬ್ ‘ಅವರು ನಿಮ್ಮ ಯೋಜನೆ ಪ್ರಕಾರವೇ ಬೌಲಿಂಗ್ ಮಾಡುತ್ತಿದ್ದಾರೆ. ನೀವೇ ಅವರಿಗೆ ಕಟ್ ಬೌಲಿಂಗ್ ಮಾಡಲು ಹೇಳಿದಿರಿ. ಈಗ ಸ್ವಲ್ಪ ಪಿಚ್ ಅಪ್ ಬೌಲಿಂಗ್ ಮಾಡಲು ಹೇಳಿ’ ಎಂದು ಕೊಹ್ಲಿಗೇ ರಿಷಬ್ ಸಲಹೆ ಕೊಡುತ್ತಿರುವ ಸಂಭಾಷಣೆ ಸ್ಟಂಪ್ ಮೈಕ್ರೋಫೋನ್ ನಲ್ಲಿ ಕೇಳಿಬಂದಿದೆ.

ಆದರೆ ಹನುಮ ವಿಹಾರಿ ಮೊದಲಿನಂತೇ ಬೌಲಿಂಗ್ ಮುಂದುವರಿಸಿದ್ದಾರೆ. ವಿಶೇಷವೆಂದರೆ ಪಂತ್ ಹೀಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ಅದೇ ಹನುಮ ವಿಹಾರಿ ಬೌಲಿಂಗ್ ನಲ್ಲಿ ಸುಲಭ ಕ್ಯಾಚ್ ಒಂದನ್ನು ಕೈ ಬಿಟ್ಟರು. ಹೀಗಾಗಿ ರಿಷಬ್ ಮಾತು ಕಡಿಮೆ ಮಾಡಿ ತಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಟ್ಟರೆ  ಟೀಂ ಇಂಡಿಯಾಕ್ಕೆ ಒಳಿತು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ಇಷ್ಟೊಂದು ನಾಚಿಕೆನಾ: Video

ಯಾಕೆ ಹೀಗೆ ಮಾಡಿದೆ, ಎಲ್ಲರ ಎದುರೇ ವೈಭವ್ ಸೂರ್ಯವಂಶಿಗೆ ಬೈದ ರಿಯಾನ್ ಪರಾಗ್ Video

Video: ಅಯ್ಯೋ ಸೋತೆವಲ್ಲಾ.. ಕಣ್ಣೀರು ಹಾಕಿದ ಬೇಬಿ ಬಾಸ್ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ ಸಕ್ಸಸ್ ಆಗೋದು ಹೇಗೆ: ಈ ವಿಡಿಯೋದಲ್ಲಿ ಪ್ರೂವ್ ಆಯ್ತು Video

IPL 2026: ಶುಭಮನ್‌ ಗಿಲ್‌ ಶತಕಕ್ಕೆ ಒಲಿದ ಜಯ: ಫೈನಲ್‌ನಲ್ಲಿ ಆರ್‌ಸಿಬಿ- ಟೈಟನ್ಸ್‌ ಸೆಣಸಾಟ

ಮುಂದಿನ ಸುದ್ದಿ
Show comments