Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಏಕದಿನ ನಾಯಕತ್ವಕ್ಕೂ ರಾಜೀನಾಮೆ ಕೊಡಲು ಸೂಚಿಸಿದ್ದ ರವಿಶಾಸ್ತ್ರಿ

ವಿರಾಟ್ ಕೊಹ್ಲಿಗೆ ಏಕದಿನ ನಾಯಕತ್ವಕ್ಕೂ ರಾಜೀನಾಮೆ ಕೊಡಲು ಸೂಚಿಸಿದ್ದ ರವಿಶಾಸ್ತ್ರಿ
ಮುಂಬೈ , ಗುರುವಾರ, 23 ಸೆಪ್ಟಂಬರ್ 2021 (10:57 IST)
ಮುಂಬೈ: ಆಟದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದ ವಿರಾಟ್ ಕೊಹ್ಲಿಗೆ ಏಕದಿನ ನಾಯಕತ್ವಕ್ಕೂ ರಾಜೀನಾಮೆ ಬಿಡಲು ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.


ಕೊಹ್ಲಿ ಬ್ಯಾಟಿಂಗ್ ಇತ್ತೀಚೆಗೆ ಕಳೆಗುಂದಿತ್ತು. ಮತ್ತೆ ವಿಶ್ವದ ಟಾಪ್ ಬ್ಯಾಟ್ಸ್ ಮನ್ ಆಗುವ ನಿಟ್ಟಿನಲ್ಲಿ ಕೊಹ್ಲಿ ನಾಯಕತ್ವದ ಜವಾಬ್ಧಾರಿಯಿಂದ ಕೊಂಚ ಹಗುರವಾಗಲು ನಿರ್ಧರಿಸಿದ್ದರು. ಅದರಂತೆ ರವಿಶಾಸ್ತ್ರಿ ಟಿ20 ತಂಡದ ಜೊತೆಗೆ ಏಕದಿನ ನಾಯಕತ್ವಕ್ಕೂ ರಾಜೀನಾಮೆ ನೀಡಲು ಸಲಹೆ ನೀಡಿದ್ದರು.

ಆದರೆ ಕೋಚ್ ಸಲಹೆ ತಿರಸ್ಕರಿಸಿದ ಕೊಹ್ಲಿ ಕೇವಲ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆರು ತಿಂಗಳ ಮೊದಲೇ ರವಿಶಾಸ್ತ್ರಿ-ಕೊಹ್ಲಿ ನಡುವೆ ಮಾತುಕತೆ ನಡೆದಿತ್ತು ಎಂದು ಬಿಸಿಸಿಐ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ನಲ್ಲಿ ಲಿಂಗ ಸಮಾನತೆ: ಬ್ಯಾಟ್ಸ್ ಮನ್ ಪದ ಬಳಕೆಗೆ ನಿಷೇಧ