Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ರವೀಂದ್ರ ಜಡೇಜಾ ಒಡೆತನದ ರೆಸ್ಟೋರೆಂಟ್ ಮೇಲೆ ದಾಳಿ

ರವೀಂದ್ರ ಜಡೇಜಾ
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಒಡೆತನದ ರೆಸ್ಟೋರೆಂಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 
ರಾಜ್ ಕೋಟ್ ನಲ್ಲಿರುವ ‘ಜಡ್ಡುಸ್ ಫುಡ್ ಫೀಲ್ಡ್’ ರೆಸ್ಟೋರೆಂಟ್ ಮೇಲೆ ರಾಜಕೋಟ್ ಮುನ್ಸಿಪಲ್ ಕಾರ್ಪೋರೇಷನ್ ನ ಆರೋಗ್ಯ ಇಲಾಖೆ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದು, ಕಳಪೆ ಆಹಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಮೂರು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಗಿದ್ದು, ಇದರಲ್ಲಿ ಜಡೇಜಾ ಒಡೆತನದ ರೆಸ್ಟೋರೆಂಟ್ ಕೂಡಾ ಸೇರಿದೆ. ಹಲವು ದಿನಗಳವರೆಗೆ ಶೇಖರಿಸಿಟ್ಟ ಬೇಯಿಸಿದ ಆಹಾರಗಳು, ಫಂಗಸ್ ಬಂದ ಬ್ರೆಡ್ ಮತ್ತು ದಿನಾಂಕ ಮೀರಿದ ಆಹಾರ ಪೊಟ್ಟಣಗಳು ಇಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಗೆದ್ದರೂ ಧೋನಿ ಅಭಿಮಾನಿಗಳಿಗೆ ನಿರಾಸೆ