Publish Date: Wed, 05 Feb 2020 (10:08 IST)
Updated Date: Wed, 05 Feb 2020 (10:10 IST)
ಮುಂಬೈ: ಪಾಕಿಸ್ತಾನ ವಿರುದ್ಧ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ನಲ್ಲಿ ಶತಕ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ಯಂಗ್ ಗನ್ ಯಶಸ್ವಿ ಜೈಸ್ವಾಲ್ ಈಗ ಮನೆ ಮಾತಾಗಿದ್ದಾರೆ.
ಕ್ರಿಕೆಟಿಗನಾಗುವ ಮೊದಲು ಪಾನಿಪೂರಿ ಮಾರಿ ಜೀವನ ಮಾಡುತ್ತಿದ್ದ ಯುವ ಕ್ರಿಕೆಟಿಗ ಈಗ ಭರವಸೆಯ ಆಟಗಾರನಾಗಿದ್ದಾರೆ. ಯಶಸ್ವಿ ಪಾಕ್ ಪಂದ್ಯಕ್ಕೆ ತಯಾರಾಗಿದ್ದು ಹೇಗೆ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಪಾಕ್ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ಮೊದಲು ಯಶಸ್ವಿ ರಾಹುಲ್ ದ್ರಾವಿಡ್ ರ ಹಳೆಯ ವಿಡಿಯೋ ನೋಡಿ ಕಲಿತುಕೊಂಡಿದ್ದರಂತೆ. ಅದೇ ರೀತಿ ಹಿರಿಯ ಆಟಗಾರ ವಾಸಿಂ ಜಾಫರ್ ಬಳಿ ಮಾತನಾಡಿ ಸಲಹೆ ಪಡೆದಿದ್ದರಂತೆ. ರಾಹುಲ್ ದ್ರಾವಿಡ್ ಸ್ಪೂರ್ತಿ ತುಂಬುವ ವಿಡಿಯೋವನ್ನು ಅಂಡರ್ 19 ಕೋಚ್ ತಮ್ಮ ತಂಡದ ಆಟಗಾರರಿಗೆ ಈ ಪಂದ್ಯಕ್ಕೆ ಮೊದಲು ತೋರಿಸಿದ್ದರಂತೆ. ಅದರಲ್ಲಿ ದ್ರಾವಿಡ್ ಹೇಳಿದ ಸ್ಪೂರ್ತಿದಾಯಕ ಮಾತುಗಳೇ ನನ್ನ ಈ ಯಶಸ್ಸಿಗೆ ಕಾರಣವಾಯಿತು ಎಂದು ಜೈಸ್ವಾಲ್ ಹೇಳಿಕೊಂಡಿದ್ದಾರೆ.