Publish Date: Tue, 26 Jan 2021 (09:01 IST)
Updated Date: Tue, 26 Jan 2021 (09:03 IST)
ಮುಂಬೈ: ಟೀಂ ಇಂಡಿಯಾ ವಾಲ್ ರಾಹುಲ್ ದ್ರಾವಿಡ್ ಸ್ಪಿನ್ನರ್ ಗಳನ್ನು ಎದುರಿಸುವ ಬಗೆ ಹೇಗೆಂದು ತನಗೆ ಮಾಡಿದ್ದ ಸುದೀರ್ಘ ಈ ಮೇಲ್ ನ್ನು ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಪ್ರಕಟಿಸಿದ ಬೆನ್ನಲ್ಲೇ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಟಾಟೆಂಡಾ ತೈಬು ದ್ರಾವಿಡ್ ತಮಗೆ ಮಾಡಿದ್ದ ಸಹಾಯವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
ಭಾರತ ಪ್ರವಾಸ ಮಾಡಿದಾಗ ಅನಿಲ್ ಕುಂಬ್ಳೆ ಬೌಲಿಂಗ್ ನಲ್ಲಿ ಮೂರು ಬಾರಿ ಸತತವಾಗಿ ಪರದಾಡಿ ಔಟಾದಾಗ ದ್ರಾವಿಡ್ ತಮಗೆ ಸ್ಪಿನ್ ಗಾರುಡಿಗನ ಎದುರಿಸುವ ಬಗೆ ಹೇಳಿಕೊಟ್ಟಿದ್ದರು ಎಂದಿದ್ದಾರೆ. ಡ್ರಿಂಕ್ಸ್ ವಿರಾಮದ ವೇಳೆ ದ್ರಾವಿಡ್ ನನಗೆ ಕುಂಬ್ಳೆಯನ್ನು ಎದುರಿಸುವುದು ಹೇಗೆಂದು ಹೇಳಿಕೊಟ್ಟರು. ಅವರನ್ನು ನಿಧಾನಗತಿಯ ವೇಗದ ಬೌಲರ್ ನಂತೆ ಎದುರಿಸು. ಆದರೆ ಪ್ಯಾಡ್ ಎದುರು ಬ್ಯಾಟ್ ಇಟ್ಟು ಆಡು ಎಂದು ಟಿಪ್ಸ್ ಹೇಳಿಕೊಟ್ಟಿದ್ದರು. ಇದು ನನಗೆ ಸಹಾಯ ಮಾಡಿತು ಎಂದು ಸ್ಮರಿಸಿಕೊಂಡಿದ್ದಾರೆ.