Publish Date: Wed, 17 Jul 2019 (09:35 IST)
Updated Date: Wed, 17 Jul 2019 (09:37 IST)
ಮುಂಬೈ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಕೂಟ ಮುಗಿದ ಬೆನ್ನಲ್ಲೇ ಎಲ್ಲರೂ ತಮ್ಮ ಮೆಚ್ಚಿನ ವಿಶ್ವ ಇಲೆವೆನ್ ತಂಡ ಪ್ರಕಟಿಸಲು ಆರಂಭಿಸಿದ್ದಾರೆ. ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಕನಸಿನ ವಿಶ್ವ ಇಲೆವೆನ್ ತಂಡ ಪ್ರಕಟಿಸಿದ್ದು, ಅದರಲ್ಲಿ ಧೋನಿಗೆ ಸ್ಥಾನವೇ ನೀಡಿಲ್ಲ.
ಸಚಿನ್ ಕನಸಿನ ತಂಡದಲ್ಲಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಧೋನಿಗೆ ಸ್ಥಾನ ನೀಡಿಲ್ಲ. ಧೋನಿ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸಚಿನ್ ವಿಶ್ವಕಪ್ ಟೂರ್ನಿಯ ನಡುವೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಕೇನ್ ವಿಲಿಯಮ್ಸನ್ ನಾಯಕರಾಗಿರುವ ತಂಡದಲ್ಲಿ ಇಂಗ್ಲೆಂಡ್ ನ ಜಾನಿ ಬೇರ್ ಸ್ಟೋ ವಿಕೆಟ್ ಕೀಪರ್ ಆಗಿದ್ದಾರೆ. ಇವರ ಹೊರತಾಗಿ ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್, ಇಂಗ್ಲೆಂಡ್ ನ ಜೋಫ‍್ರಾ ಆರ್ಚರ್, ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆದಿದ್ದಾರೆ.