Select Your Language

Notifications

webdunia
webdunia
webdunia
webdunia

ಏನೇ ಆದರೂ ವಿಂಡೀಸ್ ಟೂರ್ ಬಿಡಲ್ಲ ವಿರಾಟ್ ಕೊಹ್ಲಿ

ಏನೇ ಆದರೂ ವಿಂಡೀಸ್ ಟೂರ್ ಬಿಡಲ್ಲ ವಿರಾಟ್ ಕೊಹ್ಲಿ
ಮುಂಬೈ , ಸೋಮವಾರ, 15 ಜುಲೈ 2019 (10:36 IST)
ಮುಂಬೈ: ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಯಲಿದ್ದು, ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬಹುದು ಎಂಬ ವದಂತಿಯಿತ್ತು.


ಆದರೆ ಕೊಹ್ಲಿ ಈ ಸರಣಿಯಿಂದ ಹಿಂದೆ ಸರಿಯದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕರಾಗಬೇಕಿತ್ತು. ಆದರೆ ಸದ್ಯಕ್ಕೆ ಟೀಂ ಇಂಡಿಯಾದೊಳಗೆ ಕೊಹ್ಲಿ ಮತ್ತು ರೋಹಿತ್ ನಡುವೆ ವೈಮನಸ್ಯವಿದೆ ಎನ್ನಲಾಗಿದೆ. ಅದರ ನಡುವೆಯೇ ರೋಹಿತ್ ಗೆ ನಾಯಕತ್ವ ಬಿಟ್ಟುಕೊಟ್ಟು ತಾವು ವಿಶ್ರಾಂತಿ ಪಡೆಯುವ ನಿರ್ಧಾರದಿಂದ ಕೊಹ್ಲಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಜುಲೈ 19 ರಂದು ತಂಡದ ಆಯ್ಕೆ ನಡೆಯುವ ಸಾಧ್ಯತೆಯಿದೆ. ಆಗಸ್ಟ್ 3 ರಿಂದ ಸೆಪ್ಟೆಂಬರ್ 3 ರವರೆಗೆ ಭಾರತ ವಿಂಡೀಸ್ ನಲ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಸರಣಿ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಫೈನಲ್ ನಲ್ಲಿ ಭಾರತವಿಲ್ಲದೇ ದುಬಾರಿ ಮೊತ್ತದ ಹಣ ಕಳೆದುಕೊಂಡ ಸ್ಟಾರ್ ಸ್ಪೋರ್ಟ್ಸ್