Publish Date: Sun, 14 Jul 2019 (09:17 IST)
Updated Date: Sun, 14 Jul 2019 (09:22 IST)
ಮುಂಬೈ; ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ತವರಿಗೆ ಮರಳಲು ವಿಮಾನ ಟಿಕೆಟ್ ಸಿಗದೇ ಇಂಗ್ಲೆಂಡ್ ನಲ್ಲೇ ಬಾಕಿಯುಳಿದಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮಾ ತವರಿಗೆ ಮರಳಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರು ಲಂಡನ್ ನಲ್ಲಿ ತಮ್ಮ ತಮ್ಮ ಇಷ್ಟದ ತಾಣಗಳಿಗೆ ಕುಟುಂಬ ಸಮೇತ ಪ್ರವಾಸ ತೆರಳಿದ್ದು, ರೋಹಿತ್ ಮಾತ್ರ ಮೊದಲೇ ಪತ್ನಿ ರಿತಿಕಾ ಮತ್ತು ಪುತ್ರಿ ಸಮೈರಾ ಜತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಇತರ ಕ್ರಿಕೆಟಿಗರು ಇಂದು ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ರೋಹಿತ್ ವಿಮಾನ ನಿಲ್ದಾಣದಿಂದ ತಾವೇ ಕಾರು ಚಲಾಯಿಸಿಕೊಂಡು ಮನೆಗೆ ಮರಳುವಾಗ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ.