ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗುತ್ತಿದ್ದು, ನಾಳೆಯ ಪಂದ್ಯದಲ್ಲಿ ಟೀಂ ಇಂಡಿಯಾ ರವಿಚಂದ್ರನ್ ಅಶ್ವಿನ್ ಗೆ ಅವಕಾಶ ನೀಡಲೇಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಅನುಭವಿ ವೇಗಿ ಇಶಾಂತ್ ಶರ್ಮಾ ಸ್ಥಾನದಲ್ಲಿ ಅಶ್ವಿನ್ ರನ್ನು ಆಡಿಬೇಕು. ಇದರಿಂದ ಬ್ಯಾಟಿಂಗ್ ಕೂಡಾ ಬಲವಾಗುತ್ತದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ನಂ.2 ಬೌಲರ್ ಆಗಿರುವ ಅಶ್ವಿನ್ ರನ್ನು ಆಡಿಸಬೇಕು.ಅವರು ಐದು ಟೆಸ್ಟ್ ಶತಕ ಗಳಿಸಿದ್ದಾರೆ. ಹೀಗಾಗಿ ಅವರು ತಂಡದಲ್ಲಿದ್ದರೆ ಬ್ಯಾಟಿಂಗ್ ಗೂ ಬಲ ಬಂದಂತಾಗುತ್ತದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್ ಸೇರ್ಪಡೆಗೆ ಭಾರೀ ಒತ್ತಾಯ ಕೇಳಿಬರುತ್ತಿದ್ದು, ನಾಳೆಯ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಖಚಿತವಾಗಿದೆ.