ಲಂಡನ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಗುಮ್ಮ ಕಾಡಿತ್ತು. ಆದರೆ ನಾಲ್ಕನೇ ಟೆಸ್ಟ್ ನಲ್ಲಿ ಆ ಗುಮ್ಮ ಕಾಡುವ ಸಾಧ್ಯತೆಯಿಲ್ಲ.
ಇಂಗ್ಲೆಂಡ್ ಸ್ಟಾರ್ ವೇಗಿ ಆಂಡರ್ಸನ್ ರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗಿಡಲು ಇಂಗ್ಲೆಂಡ್ ಮ್ಯಾನೇಜ್ ಮೆಂಟ್ ಚಿಂತನೆ ನಡೆಸುತ್ತಿದೆ. ಐದನೇ ಟೆಸ್ಟ್ ವೇಳೆ ಫಿಟ್ ಆಗಲು ಆಂಡರ್ಸನ್ ರನ್ನು ನಾಲ್ಕನೇ ಟೆಸ್ಟ್ ಗೆ ವಿಶ್ರಾಂತಿ ನೀಡಲು ಇಂಗ್ಲೆಂಡ್ ಚಿಂತನೆ ನಡೆಸಿದೆ.
ಒಂದು ವೇಳೆ ಆಂಡರ್ಸನ್ ಗೆ ವಿಶ್ರಾಂತಿ ನೀಡಿದರೆ ಟೀಂ ಇಂಡಿಯಾಗೆ ಲಾಭವಾಗಲಿದೆ. ಅದರಲ್ಲೂ ವಿರಾಟ್ ಕೊಹ್ಲಿ ಪದೇ ಪದೇ ಆಂಡರ್ಸನ್ ಗೆ ವಿಕೆಟ್ ಒಪ್ಪಿಸುತ್ತಿದ್ದರು. ಈ ಪಂದ್ಯದಲ್ಲಾದರೂ ಅವರು ರನ್ ಗಳಿಸಬಹುದೆಂಬ ನಿರೀಕ್ಷೆಯಿದೆ.