Select Your Language

Notifications

webdunia
webdunia
webdunia
webdunia

ಹೊಸ ಐಪಿಎಲ್ ತಂಡಕ್ಕೆ ಟೆಂಡರ್ ಕರೆದ ಬಿಸಿಸಿಐ

ಐಪಿಎಲ್
ಮುಂಬೈ: ಮುಂದಿನ ಐಪಿಎಲ್ ವೇಳೆಗೆ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ಹೆಜ್ಜೆಯಿಟ್ಟಿದೆ.


ತನ್ನ ಐಪಿಎಲ್ ಆಡಳಿತ ಮಂಡಳಿ 2022 ರ ಐಪಿಎಲ್ ಕೂಟಕ್ಕೆ ಎರಡು ಹೊಸ ತಂಡಗಳನ್ನು ರಚಿಸುವ ಆಸಕ್ತರಿಗೆ ಬಿಡ್ ಸಲ್ಲಿಸಲು ಆಹ್ವಾನ ನೀಡಿದೆ. ಅಕ್ಟೋಬರ್ 5 ರೊಳಗಾಗಿ ಎರಡು ತಂಡಕ್ಕೆ ಬಿಡ್ ಸಲ್ಲಿಸಬಹುದಾಗಿದೆ.

ಹೊಸ ತಂಡಗಳನ್ನು ಕೊಳ್ಳಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಯನ್ನು ಬಿಸಿಸಿಐ ಅಧಿಕೃತ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ. ಇದಕ್ಕಾಗಿ 10 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ. ಇದೀಗ ಯಾವ ಎರಡು ನಗರಗಳು ಹೊಸ ತಂಡ ರಚಿಸಲು ಮುಂದೆ ಬರುತ್ತವೆ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಟಾರ್ ವೇಗಿ ಡೇಲ್ ಸ್ಟೈನ್