Daily Horoscope

Select Your Language

Notifications

webdunia
webdunia
webdunia
webdunia

ಜನಾಂಗೀಯ ನಿಂದನೆ ಮೊಹಮ್ಮದ್ ಸಿರಾಜ್ ರ ಕಟ್ಟು ಕತೆ: ಭಾರತೀಯ ಮೂಲದ ಅಭಿಮಾನಿ ಹೇಳಿಕೆ

ಮೊಹಮ್ಮದ್ ಸಿರಾಜ್
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ರನ್ನು ಕೆಲವು ಆಸ್ಟ್ರೇಲಿಯಾದ ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಆಸ್ಟ್ರೇಲಿಯನ್ ಅಭಿಮಾನಿಯೊಬ್ಬರ ಹೇಳಿಕೆ ಈಗ ಮಹತ್ವ ಪಡೆದಿದೆ.


ಪ್ರತೀಕ್ ಕೇಳ್ಕರ್ ಎಂಬ ಅಭಿಮಾನಿ ಸೇರಿದಂತೆ ಆರು ಮಂದಿಯನ್ನು ಸಿರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೈದಾನದಿಂದ ಹೊರಹಾಕಿದ್ದರು. ಇದೀಗ ಘಟನೆ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಪ್ರತೀಕ್ ‘ಅಲ್ಲಿದ್ದವರು ವೆಲ್ ಕಮ್ ಟು ಸಿಡ್ನಿ ಸಿರಾಜ್’ ಎಂದಿದ್ದರಷ್ಟೇ. ಜನಾಂಗೀಯ ನಿಂದನೆಯೆಲ್ಲಾ ಕಟ್ಟು ಕತೆ. ಸಿರಾಜ್ ತಮ್ಮ ಬೌಲಿಂಗ್ ನಲ್ಲಿ ಎರಡೆರಡು ಸಿಕ್ಸರ್ ಹೊಡೆಸಿಕೊಂಡ ಮೇಲೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಈ ರೀತಿ ಕಟ್ಟು ಕತೆ ಹೇಳಿದ್ದಾರೆ’ ಎಂದು ಆಪಾದಿಸಿದ್ದಾರೆ. ಜನಾಂಗೀಯ ನಿಂದನೆ ಆರೋಪದ ಬಗ್ಗೆ ಇದೀಗ ಐಸಿಸಿ ತನಿಖೆ ನಡೆಸುತ್ತಿದೆ. ಅದಾದ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಯ್ಲೆಟ್ ತೊಳೀಬೇಕು, ಬೆಡ್ ಕ್ಲೀನ್ ಮಾಡಬೇಕು! ಹೋಟೆಲ್ ನಲ್ಲಿ ಖೈದಿಯಾದ ಟೀಂ ಇಂಡಿಯಾ!