Publish Date: Fri, 09 Mar 2018 (10:18 IST)
Updated Date: Fri, 09 Mar 2018 (10:19 IST)
ಕೋಲ್ಕೊತ್ತಾ: ಅತ್ತ ಪತ್ನಿಗೆ ಕಿರುಕುಳ ನೀಡಿದ ಮೇರೆಗೆ ದೂರು, ಇತ್ತ ಮ್ಯಾಚ್ ಫಿಕ್ಸಿಂಗ್ ಆರೋಪ. ಅದರ ಜತೆಗೆ ಬಿಸಿಸಿಐ ವಾರ್ಷಿಕ ವೇತನ ಗುತ್ತಿಗೆಯಿಂದ ಹೊರಬಿದ್ದ ಬೇಸರ. ಇದೆಲ್ಲದರ ಬಗ್ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.
ತನಗೆ ಗೃಹ ಹಿಂಸೆ ನೀಡಿದ್ದಾನೆಂದು ಆರೋಪಿಸಿದ್ದ ಪತ್ನಿ ಹಸೀನ್ ಜಹಾನ್, ಆತ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾನೆಂದೂ ಆರೋಪಿಸಿದ್ದರು. ಇದರ ಬಗ್ಗೆ ಶಮಿ ಇದೀಗ ಪ್ರತಿಕ್ರಿಯಿಸಿದ್ದಾರೆ.
‘ದೇಶಕ್ಕಾಗಿ ಪ್ರದರ್ಶನ ಮಾಡುವುದಕ್ಕೆ ಕುರಿತಂತೆ ನನ್ನ ಆರೋಪದ ಬಗ್ಗೆ ಹೇಳಬೇಕೆಂದರೆ ಇದರ ಬದಲು ನಾನು ಪ್ರಾಣ ಕಳೆದುಕೊಳ್ಳುತ್ತೇನೆಯೇ ಹೊರತು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.
‘ನಾನು ಮತ್ತು ಹಸೀನ್ ಕುಟುಂಬದವರು ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತೀರ್ಮಾನಿಸಿದ್ದೆವು. ಈ ನಡುವೆ ಹಸೀನ್ ಯಾಕೆ ಹೀಗೆಲ್ಲಾ ಮಾಡುತ್ತಿದ್ದಾಳೋ ಗೊತ್ತಿಲ್ಲ’ ಎಂದು ಶಮಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ