Daily Horoscope
✕

ಅಭ್ಯಾಸ ಮಾಡುತ್ತಿದ್ದ ಧೋನಿಗೆ ಕಿರಿ ಕಿರಿ ಮಾಡಿದ ಲಂಕಾ ಅಭಿಮಾನಿ

Webdunia
ಬುಧವಾರ, 30 ಆಗಸ್ಟ್ 2017 (10:09 IST)
ಕೊಲೊಂಬೊ: ಕ್ರಿಕೆಟಿಗ ಧೋನಿಯನ್ನು ಆರಾಧಿಸುವ ಎಂತೆಂತಹಾ ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅಂತಹದ್ದೇ ಘಟನೆ ಕೊಲೊಂಬೋದಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿಗೆ ಮತ್ತೊಮ್ಮೆ ಎದುರಾಗಿದೆ.

 
ನಾಲ್ಕನೇ ಏಕದಿನ ಪಂದ್ಯಕ್ಕೆ ನೆಟ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿ ಬಳಿಗೆ ಲಂಕಾ ಮೂಲದ ಅಭಿಮಾನಿಯೊಬ್ಬ ಬಂದಿದ್ದ. ಮೊದಲು ರೋಹಿತ್ ಶರ್ಮಾ ಬಳಿಗೆ ಬಂದ ಆತ ಧೋನಿ ಎಂದು ತಪ್ಪಾಗಿ ತಿಳಿದು ಸೆಲ್ಫೀ ಕೇಳಲು ಬಯಸಿದ್ದ.

ಆದರೆ ರೋಹಿತ್ ನೆಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಕಡೆಗೆ ಕೈ ತೋರಿಸಿದಾಗ ಅಲ್ಲಿಗೆ ತೆರಳಿದ ಆ ಅಭಿಮಾನಿ, ಧೋನಿ ಅಭ್ಯಾಸಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಸೆಲ್ಫೀ ಕೇಳಿಕೊಂಡ. ಆದರೆ ಧೋನಿ ಒಂದು ಸೆಲ್ಫೀಗೆ ಪೋಸ್ ಕೊಟ್ಟು ಮೈದಾನದಿಂದ ಹೊರ ಹೋಗುವಂತೆ ಸೂಚಿಸಿದರು.

ಕೊನೆಗೆ ಈ ಕಸಿವಿಸಿ ಗಮನಿಸಿ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಗಳು ಆತನನ್ನು ಹೊರಗಟ್ಟಿದರು. ನಂತರ ಧೋನಿ ಎಂದಿನಂತೆ ಅಭ್ಯಾಸ ಮುಂದುವರಿಸಿದರು. ಬಳಿಕ ತಿಳಿದುಬಂದಿದ್ದೇನೆಂದರೆ, ಈತ  ಮೈದಾನದ ಸಿಬ್ಬಂದಿಗಳಲ್ಲಿ ಒಬ್ಬನಾಗಿದ್ದ. ಹೀಗಾಗಿ ಸುಲಭವಾಗಿ ಮೈದಾನದೊಳಕ್ಕೆ ಪ್ರವೇಶ ಪಡೆದಿದ್ದ.

ಇದನ್ನೂ ಓದಿ.. ಡೇರಾ ಬಾಬಾ ನಂತರ ಅಸ್ಸಾರಾಂ ಬಾಪು ಕರಾಳ ಸತ್ಯಗಳು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ನಡುವೆ ಹೀಗೆಲ್ಲಾ ನಡೆಯುತ್ತಿತ್ತಾ.. ಹರಿದಾಡುತ್ತಿದೆ ಹೀಗೊಂದು ಸುದ್ದಿ

ಅಜಿತ್ ಅಗರ್ಕರ್ ಹೋಗಿದ್ದಕ್ಕೆ ಭುವನೇಶ್ವರ್ ಕಮ್ ಬ್ಯಾಕ್, ಶಮಿಗೂ ಹೀಗೇ ಆಗಲಿ ಎಂದ ಫ್ಯಾನ್ಸ್

IND vs WI: ಭಾರತ vs ವೆಸ್ಟ್ ಇಂಡೀಸ್ 1st T20: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ; ನಮನ್ ಧೀರ್ ಟಿ20ಐ ಪದಾರ್ಪಣೆ

ಹರ್ಮನ್ ಪ್ರೀತ್ ಕೌರ್ ನಂತರ ಮಹಿಳಾ ಕ್ರಿಕೆಟ್ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ

ವಿಧಾನಸೌಧದಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭವ್ಯ ಸನ್ಮಾನ: ಸಿಎಂ ಡಿ.ಕೆ. ಶಿವಕುಮಾರ್ ಗೌರವ

ಮುಂದಿನ ಸುದ್ದಿ
Show comments