Publish Date: Thu, 07 Jan 2021 (10:12 IST)
Updated Date: Thu, 07 Jan 2021 (10:13 IST)
ಮುಂಬೈ: ಮೊಣಕೈ ಗಾಯದಿಂದಾಗಿ ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಇನ್ನು ಮೂರು ವಾರ ಕ್ರಿಕೆಟ್ ಆಡುವ ಹಾಗಿಲ್ಲ.
ಮೂರು ವಾರಗಳ ವಿಶ್ರಾಂತಿ ಪಡೆಯಲಿರುವ ರಾಹುಲ್, ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ಬಿಡುವ ಮುನ್ನ ಟ್ವೀಟ್ ಮಾಡಿರುವ ರಾಹುಲ್ ತಂಡದಿಂದ ಹೊರಬರುವ ಧೈರ್ಯ ಮಾಡಿದೆ, ಆದರೆ ಉಳಿದ ಎರಡು ಪಂದ್ಯಗಳಿಗೆ ಟೀಂ ಇಂಡಿಯಾಕ್ಕೆ ಆಲ್ ದಿ ಬೆಸ್ಟ್ ಹೇಳುವೆ ಎಂದಿದ್ದಾರೆ.