Publish Date: Thu, 07 Jan 2021 (10:03 IST)
Updated Date: Thu, 07 Jan 2021 (10:06 IST)
ಮುಂಬೈ: ಒಂದು ಕಾಲದಲ್ಲಿ ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಗ್ರಾತ್ ಮತ್ತು ಸಚಿನ್ ತೆಂಡುಲ್ಕರ್ ಪಕ್ಕಾ ಎದುರಾಳಿಗಳು. ಇಬ್ಬರ ಆಟ ನೋಡುವುದೇ ಚೆಂದ. ಆದರೆ ನಿವೃತ್ತಿಯಾದ ಮೇಲೆ ಇಬ್ಬರೂ ಒಳ್ಳೆಯ ಸ್ನೇಹಿತರು.
ನಿವೃತ್ತಿ ಬಳಿಕ ಮೆಗ್ರಾತ್ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಫೌಂಡೇಷನ್ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಮೆಗ್ರಾತ್ ಫೌಂಡೇಷನ್ ಗೆ ಸಚಿನ್ ನೆರವು ನೀಡಿದ್ದಾರೆ. ತಾವು ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡಿದ್ದಾಗ ಬಳಸಿದ ಜೆರ್ಸಿಯನ್ನು ತಮ್ಮ ಹಸ್ತಾಕ್ಷರ ಸಮೇತ ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಗೆಳೆಯನ ಫೌಂಡೇಷನ್ ಮತ್ತು ಅದರ ಕೆಲಸಗಳಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.