Publish Date: Thu, 07 Jan 2021 (09:16 IST)
Updated Date: Thu, 07 Jan 2021 (09:18 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಆರಂಭದ ದಿನಕ್ಕೆ ವರುಣರಾಯನ ಆಗಮನವಾಗಿದೆ. ಕೇವಲ 7.1 ಓವರ್ ಗಳ ಆಟವಾಗಿದ್ದು, ಆಸೀಸ್ ಮೊದಲು ಬ್ಯಾಟಿಂಗ್ ಮಾಡಿ 1 ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆರಂಭದಲ್ಲಿಯೇ ಹೊಡೆಬಡಿಯ ಓಪನರ್ ಡೇವಿಡ್ ವಾರ್ನರ್ ವಿಕೆಟ್ ಯುವ ವೇಗಿ ಮೊಹಮ್ಮದ್ ಸಿರಾಜ್ ಕಬಳಿಸಿದರು. ಹೀಗಾಗಿ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಆಗಲೇ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯ ಸ್ಥಗಿತಗೊಂಡಿತು. ಇದೀಗ ಮಳೆ ಕೊಂಚ ಬಿಡುವು ಪಡೆದಿದ್ದು, ಮತ್ತೆ ಪಂದ್ಯ ಆರಂಭವಾಗುವ ನಿರೀಕ್ಷೆಯಿದೆ.