Publish Date: Wed, 06 Jan 2021 (09:45 IST)
Updated Date: Wed, 06 Jan 2021 (09:47 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ವೀಕ್ಷಿಸಲು ಬರುವ ವೀಕ್ಷಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಊಟ ಮಾಡುವಾಗ ಬಿಟ್ಟು ಉಳಿದೆಲ್ಲಾ ಸಂದರ್ಭದಲ್ಲೂ ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್ ತೊಟ್ಟಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಆಸನದಲ್ಲಿ ಕೂರಬೇಕು. ಮೈದಾನದೊಳಗೆ ಪ್ರವೇಶಿಸುವಾಗಲೂ ಕ್ಯೂ ನಿಂತು ಒಬ್ಬೊಬ್ಬರಾಗಿ ಪ್ರವೇಶ ಮಾಡಬೇಕು ಎಂದು ಸ್ಥಳೀಯಾಡಳಿತ ಆದೇಶ ನೀಡಿದೆ. ಸಿಡ್ನಿಯಲ್ಲಿ ಕೊರೋನಾ ಪ್ರಕರಣಗಳಿರುವ ಹಿನ್ನಲೆಯಲ್ಲಿ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ.