Publish Date: Wed, 06 Jan 2021 (09:14 IST)
Updated Date: Wed, 06 Jan 2021 (09:16 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕೊರೋನಾ ಪ್ರಕರಣದ ನಡುವೆ ಸಿಡ್ನಿಯಲ್ಲಿ ತಕ್ಕ ಸುರಕ್ಷತಾ ಕ್ರಮಗೊಳೊಂದಿಗೆ ಪಂದ್ಯ ನಡೆಯಲಿದೆ.
ಭಾರತಕ್ಕೆ ಗಾಯಾಳುಗಳದ್ದೇ ಸಮಸ್ಯೆ. ಇದೀಗ ಕೆಎಲ್ ರಾಹುಲ್ ಕೂಡಾ ಗಾಯಾಳುಗಳ ಗೂಡು ಸೇರಿಕೊಂಡಿರುವುದು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರೆ, ಮಯಾಂಕ್ ಅಗರ್ವಾಲ್ ಹೊರಗುಳಿಯಲಿದ್ದಾರೆ. ರಾಹುಲ್ ಗಾಯಗೊಂಡಿರುವುದರಿಂದ ಹನುಮ ವಿಹಾರಿ ಸ್ಥಾನಕ್ಕೆ ಧಕ್ಕೆಯಾಗದು. ಉಳಿದಂತೆ ಬೌಲಿಂಗ್ ನಲ್ಲಿ ಉಮೇಶ್ ಯಾದವ್ ಸ್ಥಾನಕ್ಕೆ ಟಿ ನಟರಾಜನ್ ಆಗಮನವಾಗಲಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯಾಗದು. ಭಾರತೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 5 ಗಂಟೆಗೆ ಪಂದ್ಯ ಆರಂಭವಾಗಲಿದೆ.