ದ್ರಾವಿಡ್ ಗರಡಿಯಲ್ಲಿ ಇನ್ನು ಕೆಎಲ್ ರಾಹುಲ್ ಗೆ ಕ್ಲಾಸ್!

Webdunia
ಶನಿವಾರ, 26 ಜನವರಿ 2019 (09:02 IST)
ಮುಂಬೈ: ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರರು ಅಷ್ಟು ಭೇಗ ತಮ್ಮ ಕ್ಲಾಸ್‍, ಫಾರ್ಮ್ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಟೀಂ ಇಂಡಿಯಾದ ಅನೇಕ ಯುವ ಆಟಗಾರರು ಈಗಾಗಲೇ ನಿರೂಪಿಸಿದ್ದಾರೆ.


ಇದೀಗ ಫಾರ್ಮ್ ಕಳೆದುಕೊಂಡಿರುವ, ನಿಷೇಧ ಶಿಕ್ಷ ಮುಗಿಸಿ ಮಾನಸಿಕವಾಗಿ ಕುಗ್ಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದು, ಇಂಗ್ಲೆಂಡ್ ಲಯನ್ಸ್ ಪರ ಆಡಲಿದ್ದಾರೆ.

ಈ ಮೂಲಕ ಭಾರತ ಎ ತಂಡದ ಕೋಚ್ ಆಗಿರುವ ಗುರು ರಾಹುಲ್ ದ್ರಾವಿಡ್ ಗರಡಿಯಲ್ಲಿ ಟ್ರೈನಿಂಗ್ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಗೆ ನಿಷೇಧ ಶಿಕ್ಷೆಯಾಗಿದ್ದಾಗ ದ್ರಾವಿಡ್ ಈ ಆಟಗಾರರ ಪರವಾಗಿ ಮಾತನಾಡಿದ್ದರು. ಇವರಿಗೆ ಸರಿಯಾದ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದಿದ್ದರು. ಇದೀಗ ಹಾರ್ದಿಕ್ ನೇರವಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾದರೆ, ಫಾರ್ಮ್ ಕಳೆದುಕೊಂಡಿರುವ ರಾಹುಲ್ ದ್ರಾವಿಡ್ ರ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದುಕೊಂಡಿರುವ ಫಾರ್ಮ್ ಕಂಡುಕೊಳ್ಳಲು ರಾಹುಲ್ ಗೆ ಇದಕ್ಕಿಂತ ಸುವರ್ಣಾವಕಾಶ ಇನ್ನೊಂದು ಸಿಗದು. ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೆಎಲ್ ರಾಹುಲ್ ರನ್ನು ದ್ರಾವಿಡ್ ಸಿದ್ಧ ಮಾಡಿ ಕಳುಹಿಸುತ್ತಾರಾ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒಬ್ಬರನ್ನೊಬ್ಬರು ನೋಡಿ ಎಂಥಾ ಖುಷಿ ವಿಡಿಯೋ ನೋಡಿ

ಕೊಹ್ಲಿ, ರೋಹಿತ್ ಆಡುವ ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ ಲೈವ್ ಎಲ್ಲಿ ನೋಡಬೇಕು

ಫಿಟ್ ಆಗಿದ್ರೂ ನನ್ನ ಯಾಕೆ ಕಡೆಗಣಿಸ್ತಿದ್ದೀರಿ: ಆಯ್ಕೆ ಸಮಿತಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೊಹಮ್ಮದ್ ಶಮಿ

ಮುಂದಿನ ಸುದ್ದಿ
Show comments