ಆಥಿಯಾ ಶೆಟ್ಟಿ ಜತೆ ಕೆಎಲ್ ರಾಹುಲ್ ಕಿಚನ್ ಎಡವಟ್ಟು!

ಗುರುವಾರ, 19 ಮಾರ್ಚ್ 2020 (11:31 IST)
ಬೆಂಗಳೂರು: ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯಿದೆ. ಇದರ ನಡುವೆ ಕೆಎಲ್ ರಾಹುಲ್ ಅಥಿಯಾ ಜತೆಗಿನ ಕಿಚನ್ ಎಡವಟ್ಟಿನ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಫನ್ನಿ ಫೋಟೋವೊಂದನ್ನು ಪ್ರಕಟಿಸಿದ್ದಾರೆ.


ಕೊರೋನಾವೈರಸ್ ನಿಂದಾಗಿ ಸದ್ಯಕ್ಕೆ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಈ ಬಿಡುವಿನ ಅವಧಿಯಲ್ಲಿ ರಾಹುಲ್ ತಮ್ಮ ಗೆಳತಿ ಜತೆ ಕಾಲ ಕಳೆಯುತ್ತಿದ್ದಾರೆ. ಅಥಿಯಾ ಬನಾನ ಬ್ರೆಡ್ ಬೇಯಿಸಲು ಹೋಗಿ ಅದು ಇನ್ನೇನೋ ಆಗಿರುವ ಕತೆಯನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಸುಟ್ಟು ಕರಕಲಾದ ಬ್ರೆಡ್ ನ್ನು ಪ್ರಕಟಿಸಿರುವ ರಾಹುಲ್ ನಿರೀಕ್ಷೆಗಳು ಏನೋ ಇತ್ತು, ಕೊನೆಗೆ ಇದೇ ಆಗಿದ್ದು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್ ನಡೆಸಲು ಪ್ಲ್ಯಾನ್ ಬಿ ರೆಡಿ ಮಾಡಿಕೊಂಡ ಬಿಸಿಸಿಐ