ಸುನಿಲ್ ಶೆಟ್ಟಿ ಪುತ್ರಿ ಜತೆಗೆ ಕೆಲ್ ರಾಹುಲ್ ಲವ್?

ಭಾನುವಾರ, 30 ಜೂನ್ 2019 (09:24 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹೆಸರು ಈಗ ಮತ್ತೊಬ್ಬ ನಟಿ ಜತೆ ಕೇಳಿಬರುತ್ತಿದೆ. ಆಂಗ್ಲ ಮಾಧ್ಯಮಗಳ ವರದಿ ಪ್ರಕಾರ ರಾಹುಲ್ ಬಾಳಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗಿದೆ.


ಆಕೆ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ, ನಟಿ ಆತಿಥ್ಯ ಶೆಟ್ಟಿ. ಮೂಲಗಳ ಪ್ರಕಾರ ಇವರಿಬ್ಬರೂ ಕಳೆದ ಫೆಬ್ರವರಿಯಿಂದ ಡೇಟಿಂಗ್ ಮಾಡುತ್ತಿದ್ದಾರಂತೆ. ಆತಿಥ್ಯ ಈಗಷ್ಟೇ ಬಾಲಿವುಡ್ ನಲ್ಲಿ ಕಾಲೂರುತ್ತಿದ್ದಾಳೆ.

ಆದರೆ ಇದಕ್ಕೂ ಮೊದಲು ರಾಹುಲ್ ಹೆಸರು ಹಲವು ನಟಿಯರ ಜತೆ ಥಳುಕು ಹಾಕಿಕೊಂಡಿತ್ತು. ಆದರೆ ಅವನ್ನೆಲ್ಲಾ ಅವರು ನಿರಾಕರಿಸಿದ್ದರು. ಈಗ ಆತಿಥ್ಯ ಜತೆ ನಿಜವಾಗಿಯೂ ರಾಹುಲ್ ಗೆ ಲವ್ ಆಗಿದೆಯಾ ಎಂದು ಅವರೇ ಸ್ಪಷ್ಟನೆ ನೀಡಬೇಕಿದೆಯಷ್ಟೇ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಶ್ವಕಪ್ 2019: ಟೀಂ ಇಂಡಿಯಾ ಆಡುವ ಪಂದ್ಯಗಳು ಭಾನುವಾರವೇ ಏಕೆ?