ಬಾರ್ಡರ್ - ಗವಾಸ್ಕರ್ ಟ್ರೋಫಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಮಧ್ಯಪ್ರದೇಶದ ಉಜ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೆಲೆಬ್ರಿಟಿ ದಂಪತಿ ಕೊಹ್ಲಿ ದಂಪತಿ, ಇತರ ಯಾತ್ರಾರ್ಥಿಗಳೊಂದಿಗೆ ದೇವಾಲಯದ ಒಳಗೆ ಕುಳಿತಿರುವುದನ್ನು ಕಾಣಬಹುದು. ಇಂದೋರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಮುಗಿದ ಒಂದು ದಿನದ ನಂತರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.. ಭೇಟಿ ಬಗ್ಗೆ, ಪ್ರತಿಕ್ರಿಯೆ ನೀಡಿರುವ ಅನುಷ್ಕಾ ಶರ್ಮಾ, ನಾವು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ