Publish Date: Mon, 19 Dec 2022 (10:42 IST)
Updated Date: Mon, 19 Dec 2022 (10:48 IST)
ಮುಂಬೈ: ಫಿಫಾ ವಿಶ್ವಕಪ್ ಫೈನಲ್ ನಲ್ಲಿ ತಮ್ಮ ಅರ್ಜೆಂಟೀನಾ ತಂಡದ ಪರವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 2 ಗೋಲು ಗಳಿಸಿ ಲಿಯೊನೆಲ್ ಮೆಸ್ಸಿ ಗೆಲುವಿನ ರೂವಾರಿಯಾದರು.
ವಿಶ್ವ ಶ್ರೇಷ್ಠ ಫುಟ್ಬಾಲಿಗರಾಗಿರುವ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ನಡುವೆ ಕೆಲವು ಸಾಮ್ಯತೆಗಳಿವೆ. ಅವು ಯಾವುವು ನೋಡೋಣ.
ಇಬ್ಬರ ಜೆರ್ಸಿ ಸಂಖ್ಯೆಯೂ 10 ಎಂಬುದು ವಿಶೇಷತೆಯಾದರೆ ಇಬ್ಬರೂ ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ನಲ್ಲಿ ಪಡೆದ ಪ್ರಶಸ್ತಿಗಳಲ್ಲೂ ಕೆಲವು ಸಾಮ್ಯತೆಗಳಿವೆ.
ಈ ಹಿಂದೆ ಗಂಗೂಲಿ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ನಲ್ಲಿ ಸೋತಾಗ ಸಚಿನ್ ಸರಣಿ ಶ್ರೇಷ್ಠರಾಗಿ ಗೋಲ್ಡನ್ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದರು. ಅದೇ ರೀತಿ ಕೆಲವು ವರ್ಷಗಳ ಹಿಂದೆ ಲಿಯೊನೆಲ್ ಮೆಸ್ಸಿ ಕೂಡಾ ಫೈನಲ್ ನಲ್ಲಿ ಅರ್ಜೆಂಟೀನಾ ಸೋತಾಗ ಗೋಲ್ಡನ್ ಟ್ರೋಫಿ ಉಡುಗೊರೆಯಾಗಿ ಪಡೆದಿದ್ದರು. ಹಲವು ವರ್ಷಗಳ ಕಾಯುವಿಕೆ ಬಳಿಕ ಇಬ್ಬರೂ ವಿಶ್ವ ಚಾಂಪಿಯನ್ ತಂಡದ ಭಾಗವಾಗಿದ್ದಾರೆ.